ಟ್ಯಾಂಕರ್ ಲಾರಿ ಹರಿದು ಬೈಕ್ ಸವಾರ ದುರ್ಮರಣ

Crime
Crime
Published on

ರಾಣೆಬೆನ್ನೂರು: ಟ್ಯಾಂಕರ್ ಲಾರಿ ಹರಿದು ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಹಲಗೇರಿ ವೃತ್ತದಲ್ಲಿ ನಡೆದಿದೆ.

ತಾಲೂಕಿನ ಹಲಗೇರಿ ಗ್ರಾಮದ ಗುಡ್ಡಪ್ಪ ನಿಂಗಪ್ಪ ಬೂದಿಹಾಳ ಮೃತ ವ್ಯಕ್ತಿ.

ಈತ ಹಲಗೇರಿ ಕಡೆಯಿಂದ ರಾಣೆಬೆನ್ನೂರ ನಗರಕ್ಕೆ ಬರುತ್ತಿದ್ದ ಸಮಯದಲ್ಲಿ ಹಿಂದಿನಿಂದ ಬಂದ ಟ್ಯಾಂಕರ್ ಲಾರಿಯವನು ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕೆಳಗೆ ಬಿದ್ದ ಗುಡ್ಡಪ್ಪನ ಮೇಲೆ ಲಾರಿ ಹತ್ತಿಸಿದ್ದಾನೆ. ಇದರಿಂದ ಗುಡ್ಡಪ್ಪ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net