

ಹಿರೇಕೆರೂರ: ಮರದಲ್ಲಿ ಹುಣಸೆಹಣ್ಣು ಕೀಳುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಜೋಗಿಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಸಣ್ಣಹಾಲಪ್ಪ ತಿಮ್ಮಪ್ಪ ವಡ್ಡರ (70) ಮೃತ ವ್ಯಕ್ತಿ.
ಇವರು ಜಮೀನಿನಲ್ಲಿನ ಹುಣಸೆಮರ ಹತ್ತಿ ಹುಣಸೆಹಣ್ಣು ಕೀಳುತ್ತಿದ್ದ ಸಮಯದಲ್ಲಿ ಮರದಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.