ಆರ್ಥಿಕ ಸಬಲತೆಗೆ ಸ್ವ ಉದ್ಯೋಗ ಕೈಗೊಳ್ಳಲಿ

ಹಾನಗಲ್ಲ ತಾಲೂಕಿನ ವಳಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ರಾಠೋಡ ಉಪನ್ಯಾಸ ನೀಡಿದರು. ಶಾರದಾ ದೇಸಾಯಿ, ಸುಶೀಲಮ್ಮ, ಹಳ್ಳಿಕೊಪ್ಪದಮಠ, ಕಮಲವ್ವ ಮೆಳ್ಳಳ್ಳಿ, ಅಕ್ಕಮ್ಮ ಖಾನನವರ, ಗಂಗವ್ವ ತಳವಾರ, ಕಮಲವ್ವ ವಾಲ್ಮೀಕಿ ಇತರರಿದ್ದರು.
ಹಾನಗಲ್ಲ ತಾಲೂಕಿನ ವಳಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ರಾಠೋಡ ಉಪನ್ಯಾಸ ನೀಡಿದರು. ಶಾರದಾ ದೇಸಾಯಿ, ಸುಶೀಲಮ್ಮ, ಹಳ್ಳಿಕೊಪ್ಪದಮಠ, ಕಮಲವ್ವ ಮೆಳ್ಳಳ್ಳಿ, ಅಕ್ಕಮ್ಮ ಖಾನನವರ, ಗಂಗವ್ವ ತಳವಾರ, ಕಮಲವ್ವ ವಾಲ್ಮೀಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ರಾಠೋಡ ಅಭಿಮತ
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಹಾನಗಲ್ಲ: ಬಾಲ್ಯದಿಂದ ಹಿಡಿದು ಗೃಹಿಣಿ ಆಗುವವರೆಗೆ ಮಹಿಳೆ ಹೇಗೆ ಇರಬೇಕು ಎಂಬುದನ್ನು ಮನೆಯ ವಾತಾವರಣ ಕಲಿಸುತ್ತದೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಸ್ವ ಉದ್ಯೋಗಗಳನ್ನು ಕೈಗೊಳ್ಳಬೇಕು ಎಂದು ವಾಣಿಶ್ರೀ ರಾಠೋಡ ಹೇಳಿದರು.
ತಾಲೂಕಿನ ವಳಗೇರಿ ಗ್ರಾಮದಲ್ಲಿ ಮಾಸನಕಟ್ಟಿ ಗ್ರಾಮ ಪಂಚಾಯಿತಿ ಹಾಗೂ ಅರಿವು ಗ್ರಂಥಾಲಯದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಮಕ್ಕಳಿಗೆ ಶೈಕ್ಷಣಿಕ ಅಡಿಪಾಯ ಹಾಕುವಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಮಕ್ಕಳು ಕ್ರಿಯಾಶೀಲ ವ್ಯಕ್ತಿತ್ವ ಪಡೆಯಲು ತಾಯಿಯ ಪಾತ್ರ ಮುಖ್ಯವಾಗುತ್ತದೆ. ಮಕ್ಕಳು ಕೆಟ್ಟ ಹವ್ಯಾಸದಿಂದ ದೂರವಿರಲು ತಾಯಿಯ ಸಲಹೆ, ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದರು.
ಶಿಕ್ಷಕಿ ಶೈಲಾ ತಳವಾರ ಮಾತನಾಡಿ, ಮನೆಯಲ್ಲಿ ಪುರುಷರು ಕೃಷಿ, ಉದ್ಯೋಗ, ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಮಕ್ಕಳು ಶಾಲೆಗೆ ತೆರಳುತ್ತಾರೆ. ಆದರೆ, ಸಂಬಂಧಿಕರು, ಅತಿಥಿಗಳು ಮನೆಗೆ ಆಗಮಿಸಿದಾಗ ಇವರೆಲ್ಲರ ಆದರಾಥಿತ್ಯದ ಜವಾಬ್ದಾರಿಯನ್ನು ಮನೆಯಲ್ಲಿನ ಮಹಿಳೆಯರು ನಿಭಾಯಿಸುತ್ತಾರೆ. ಮಹಿಳೆಯರ ಕೆಲಸ ಕಾರ್ಯಗಳನ್ನು ಗೌರವಿಸುವಂತಾಗಬೇಕು. ಆಗ ಸಮಾಜದಲ್ಲಿ ಸ್ತ್ರೀಯರಿಗೆ ಗೌರವ ಬರುತ್ತದೆ ಎಂದರು.
ಆದಿಶಕ್ತಿ ಸೋಬಾನೆ ಪದ ಕಲಾ ತಂಡದ ಕಲಾವಿದರು ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಕುರಿತು ರಚಿಸಿದ ಗೀತೆಯನ್ನು ಪ್ರಸ್ತುತ ಪಡಿಸಿದರು. ಕಮಲವ್ವ ಮೆಳ್ಳಳ್ಳಿ, ಅಕ್ಕಮ್ಮ ಖಾನನವರ್, ಗಂಗವ್ವ ತಳವಾರ, ಕಮಲವ್ವ ವಾಲ್ಮೀಕಿ, ಕಸ್ತೂರವ್ವ ಹಿರೇಮಠ, ನೀಲವ್ವ ವಾಲ್ಮೀಕಿ, ಕಮಲವ್ವ ಹೊಸಗೌಡ್ರು, ಶಿವಲೀಲಾ ಹಳ್ಳಿಕೊಪ್ಪದಮಠ, ಅಶ್ವಿನಿ ಕೋರಿಶೆಟ್ಟರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net