

ಹಿರೇಕೆರೂರ: ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಎಂ.ಎಂ. ಯತ್ತಿನಹಳ್ಳಿಯಲ್ಲಿ ನಡೆದಿದೆ.
ಧನರಾಜ ರಾಜಾನಾಯ್ಕ ಲಮಾಣಿ (24) ಮೃತ ಯುವಕ.
ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿ ನಮ್ಮ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ. ಆದ್ದರಿಂದ ನಮ್ಮ ಮದುವೆ ಸಾಧ್ಯವಿಲ್ಲ ಎಂದು ಹೇಳಿದ್ದಳು. ಇದರಿಂದ ಮನನೊಂದು ಧನರಾಜ ಮನೆಯಲ್ಲಿದ್ದ ಶುಂಠಿ ಬೆಳೆಗೆ ಹೊಡೆಯುವ ಔಷಧ ಕುಡಿದು ಮೃತಪಟ್ಟಿದ್ದಾನೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.