

ಹಾವೇರಿ: ಕಬ್ಬು ಕಟಾವು ಮಾಡಲು ಬರುವುದಾಗಿ ನಂಬಿಸಿ 3.71 ಕೋಟಿ ರೂ. ಪಡೆದುಕೊಂಡು ಕೆಲಸಕ್ಕೆ ಬಾರದೆ ವಂಚನೆ ಮಾಡಿದ 27 ಜನರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂದಾರ ತಾಲೂಕಿನ ದಿಗ್ರಾಸ್ ಗ್ರಾಮದ ಉಲ್ಲಾಸ ಧನುಜಿ ರಾಥೋಡ್ ಸೇರಿ 27 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.
ತಾಲೂಕಿನ ಸಂಗೂರಿನ ಜಿ.ಎಂ. ಶುಗರ್ಸ್ ಕಂಪನಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮಾಣೀಕರಾವ ಗಡದೆ ಎಂಬುವರು ಇವರ ವಿರುದ್ದ ದೂರು ನೀಡಿದ್ದಾರೆ.
ಆರೋಪಿತರು ಕಬ್ಬು ಕಟಾವು ಮತ್ತು ಸಾಗಾಟ ಮಾಡುವುದಾಗಿ ನಂಬಿಸಿ ಕಂಪನಿಯಿಂದ 3.71 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ. ನಂತರ ಕೆಲಸಕ್ಕೆ ಬಾರದೆ ಹಾಗೂ ಹಣ ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.