

ರಾಣೆಬೆನ್ನೂರು: ವಿದ್ಯಾಥಿರ್ಗಳು ಸಮಾಜದ ವಿವಿಧ ಸಂ&ಸಂಸ್ಥೆಗಳಿಂದ ನೀಡುವ ಪಠ್ಯಪುಸ್ತಕ ಸೇರಿ ಇತರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಧ್ಯಯನ ಮಾಡಬೇಕು ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಹೇಳಿದರು.
ರೈತ ಹುತಾತ್ಮ ದಿನಾಚರಣೆ ನಿಮಿತ್ತ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ಇಲ್ಲಿಯ ಅಶೋಕ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.14ರಲ್ಲಿ ಏರ್ಪಡಿಸಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಣೆ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಿವೈಎಸ್ಪಿ ಲೋಕೇಶ ಜೆ. ಮಾತನಾಡಿ, ವಿದ್ಯಾಥಿರ್ಗಳು ಉತ್ತಮ ಅಧ್ಯಯನ ಮಾಡಿ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ರೂಪಗೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. ವಿದ್ಯಾಥಿರ್ಗಳು ನಿರಂತರ ಅಧ್ಯಯನ ಕೈಗೊಳ್ಳಬೇಕು ಎಂದರು.
ಪೊಲೀಸ್ ಇಲಾಖೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಮನೆಯ ಮಾಲೀಕರು ಮನೆಯಿಂದ ಎಲ್ಲಿಗಾದರೂ ಹೊರಗಡೆ ಹೋದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಬಿಇಒ ಶ್ಯಾಮಸುಂದರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಶಹರ ಠಾಣೆ ಸಿಪಿಐ ವೆಂಕಟೇಶ, ಸಂಚಾರ ಠಾಣೆ ಪಿಎಸ್ಐ ಕೃಷ್ಣಪ್ಪ ತೋಪಿನ, ತಾಪಂ ಇಒ ಡಾ. ವೆಂಕಟೇಶ ಬಿದರಿ, ಪುಟ್ಟಪ್ಪ ಮರಿಯಮ್ಮನವರ, ಚಂದ್ರಣ್ಣ ತಿಳವಳ್ಳಿ, ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರುದ್ರಪ್ಪ ಬಳಿಗಾರ, ಶೈಲಮ್ಮ ಹರನಗಿರಿ, ಲಲಿತಾ ಲಮಾಣಿ, ಬಸವರಾಜ ಮೆಗಳಗೇರಿ, ಅಮಿದಾಬಾನು ಶಿಡೇನೂರ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.