

ರಾಣೆಬೆನ್ನೂರು: ವಿದ್ಯಾಥಿರ್ಗಳು ಕೇವಲ ಹೆಚ್ಚಿನ ಅಂಕ ಗಳಿಸುವುದಕ್ಕೆ ಸೀಮಿತವಾಗದೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಹಾಗೂ ಪೋಷಕರನ್ನು ಗೌರವಿಸಿ, ಅವರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದು ವೈದ್ಯ ಡಾ. ಮಮತಾ ಮುಳಕೊಂಪಿಮಠ ಹೇಳಿದರು.
ಇಲ್ಲಿನ ಮೃತ್ಯುಂಜಯನಗರದ ಚನ್ನೇಶ್ವರಮಠದ ಲಿಂ.ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಸಭಾಂಗಣದಲ್ಲಿ ಜಂಗಮ ಜ್ಯೋತಿ ಮಹಿಳಾ ವೇದಿಕೆಯಿಂದ ಏರ್ಪಡಿಸಿದ್ದ ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳು ನಿರಂತರ ಅಧ್ಯಯನ ಕೈಗೊಂಡು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ವಿದ್ಯಾಥಿರ್ಗಳು ಮೊಬೈಲ್, ಸಾಮಾಜಿಕ ಜಾಲ ತಾಣ, ಫೇಸ್ಬುಕ್ ಕಡೆಗೆ ಹೆಚ್ಚು ಒತ್ತು ಕೊಟ್ಟು ಆರೋಗ್ಯ ಹಾನಿ ಮಾಡಿಕೊಳ್ಳಬಾರದು. ಅತಿಯಾದ ಮೊಬೈಲ್ ಬಳಕೆಯಿಂದ ಎಳೆಯ ವಯಸ್ಸಿನ ಮಕ್ಕಳ ಕಣ್ಣಿನ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ. ಮಕ್ಕಳು ಶೈಕ್ಷಣಿಕವಾಗಿ ಪಾಠ ಪ್ರವಚನಕ್ಕಾಗಿ ಮಾತ್ರ ಮೊಬೈಲ್ ಬಳಕೆ ಮಾಡಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಸಿ. ಷಡಕ್ಷರಿಮಠ ಮಾತನಾಡಿ, ಯಾವುದೇ ಸಮುದಾಯದ ಅಭಿವೃದ್ದಿಗೆ ಶಿಕ್ಷಣವೇ ಪ್ರಮುಖ ಸಾಧನ. ವಿದ್ಯಾಥಿರ್ಗಳನ್ನು ಉತ್ತೇಜಿಸುವ ಉದ್ದೇಶದಿಂದ ಜಂಗಮ ಜ್ಯೋತಿ ಮಹಿಳಾ ವೇದಿಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆ ತಂದಿದೆ. ನಮ್ಮ ಜಂಗಮ ಸಮಾಜದ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸ ಆಗಬೇಕು ಎಂದರು.
ವೇದಿಕೆಯ ಅಧ್ಯಕ್ಷೆ ಗೀತಾ ಭಸ್ಮಾಂಗಿಮಠ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಲ್ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗೌರವ ಅಧ್ಯಕ್ಷೆ ಇಂದಿರಾ ಹಿರೇಮಠ, ರಾಜೇಶ್ವರಿ ಹನಗೋಡಿಮಠ, ಶೋಭಾ ದೇವಗಿರಿಮಠ, ಗಾಯತ್ರಾ ಹಿರೇಮಠ, ವಿದ್ಯಾಶ್ರಿ, ನಿರುಪಮಾ ಮಳೇಮಠ, ಶೈಲಜಾ ಉಜ್ಜನಿಮಠ, ಶಶಿಕಲಾ ಮಠದ, ಚೆನ್ನಮ್ಮ ಗುರುಪಾದದೇವರಮಠ, ಕವಿತಾ ಕೂರಗುಂದಮಠ, ಜಯಮ್ಮ ಆರಾಧ್ಯಮಠ, ಮಂಗಳಾ ತೊರ್ಗಸಿಮಳೆಮಠ, ಉಮಾ ಚಪ್ಪರದಳ್ಳಿಮಠ, ಸುಧಾ ಮಠದ, ಶೋಭಾ ಶಂಕ್ರಿಮಠ ಮತ್ತಿತರರು ಉಪಸ್ಥಿತರಿದ್ದರು.