Strict action ನಕಲಿ ಬೀಜ, ಗೊಬ್ಬರ ಮಾರಿದರೆ ಕಠಿಣ ಕ್ರಮ

Strict action ಬ್ಯಾಡಗಿ ಪಟ್ಟಣದ ತಹಸೀಲ್ದಾರ್​ ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು.
Strict action ಬ್ಯಾಡಗಿ ಪಟ್ಟಣದ ತಹಸೀಲ್ದಾರ್​ ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು.
Published on
ಬ್ಯಾಡಗಿ: ರೈತರಿಗೆ ನಕಲಿ ಬೀಜ, ಗೊಬ್ಬರ ಮಾರಾಟ ಮಾಡಿದಲ್ಲಿ ಕಠಿಣ ಕ್ರಮ (Strict action) ಕೈಗೊಳ್ಳಲು ಸೂಚಿಸಲಾಗಿದೆ. ಮಾರಾಟಗಾರರು ರೈತರಿಗೆ ಯಾವುದೇ ಕಾರಣಕ್ಕೂ ಮೋಸ ಮಾಡಲು ಯತ್ನಿಸದೆ, ಗುಣಮಟ್ಟದ ಬೀಜ ವಿತರಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ತಹಸೀಲ್ದಾರ್​ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬೀಜ, ಗೊಬ್ಬರ ಸೇರಿದಂತೆ ಕೃಷಿ ಪರಿಕರ ಮಾರಾಟದ 88 ಕೇಂದ್ರಗಳಿವೆ. ಸರ್ಕಾರ ನಿಗದಿಪಡಿಸಿದಂತೆ ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರ ಪೂರೈಸುತ್ತಿದೆ. ಅಗತ್ಯಕ್ಕೆ ತಕ್ಕಷ್ಟು ಈಗಾಗಲೇ ದಾಸ್ತಾನು ನಡೆದಿದೆ. ಹಿಂದಿನ ವರ್ಷ ನಕಲಿ ಬೀಜದಿಂದ ರೈತರಿಗೆ ತೊಂದರೆಯಾಗಿದೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಯೂರಿಯಾ, ಗೊಬ್ಬರ ಜತೆಗೆ ಲಿಂಕ್​ ಆಗಿ ಜಿಂಕ್​, ಜಿಪ್ಸಂ ಇತ್ಯಾದಿ ಪೋಷಕಾಂಶ ಸಾಮಗ್ರಿಗಳನ್ನು ಕಡ್ಡಾಯವಾಗಿ ವಿತರಿಸಬಾರದು. ರೈತರು ಬೇಡಿಕೆ ಸಲ್ಲಿಸಿದಲ್ಲಿ ಮಾತ್ರ ಪೂರೈಸಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, 32 ಸಾವಿರ ಹೆಕ್ಟೇರ್​ ಭೂಮಿಗೆ ಅಗತ್ಯವಾದ ಬೀಜ, ಗೊಬ್ಬರ ಪೂರೈಸಲು ದಾಸ್ತಾನು ಪಟ್ಟಿ ಕಳುಹಿಸಿದ್ದೇವೆ. ಪರಿಕರಗಳನ್ನು ನಿಗದಿತ ಬೆಲೆ ಮಾರಾಟ ಮಾಡಬೇಕು. ನಿಯಮ ಮೀರಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ತಹಸೀಲ್ದಾರ್​ ಚಂದ್ರಶೇಖರ ನಾಯಕ, ಅಧಿಕಾರಿಗಳಾದ ಕರಿಯಲ್ಲಪ್ಪ ಕೆ., ನಾಗರಾಜ ಬನ್ನಿಹಟ್ಟಿ, ಗುಡ್ಡಪ್ಪ ಅರಳೀಕಟ್ಟಿ, ಮಲ್ಲಿಕಾರ್ಜುನ ಬಳ್ಳಾರಿ, ಜಯಣ್ಣ ಮಲ್ಲಿಗಾರ, ರುದ್ರಗೌಡ್ರ ಕಾಡನಗೌಡ್ರ, ಮಂಜುನಾಥ ಬೆನಕನಕೊಂಡ, ಶಂಕರಗೌಡ್ರ ಪಾಟೀಲ, ಗಂಗಣ್ಣ ಎಲಿ, ಕರಬಸಪ್ಪ ಹಾದರಗೇರಿ ಹಾಗೂ ಮಾರಾಟಗಾರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net