ಬೀದಿ ನಾಯಿ ದಾಳಿಯಿಂದ ಬಾಲಕಿಗೆ ಗಂಭೀರ ಗಾಯ

ಗಾಯಗೊಂಡ ಬಾಲಕಿ
ಗಾಯಗೊಂಡ ಬಾಲಕಿ
Published on

ರಾಣೆಬೆನ್ನೂರ: ಬೀದಿ ನಾಯಿ ದಾಳಿಯಿಂದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಟನೆ ಇಲ್ಲಿಯ ರಂಗನಾಥ ನಗರದಲ್ಲಿ ಸೋಮವಾರ ನಡೆದಿದೆ.

ಪ್ರಶಾಂತ ಮತ್ತು ರೇಖಾ ದಂಪತಿಯ ಬಾಲಕಿ ಈಶ್ವರಿ (7) ಗಾಯಗೊಂಡ ಬಾಲಕಿ.

ಈಕೆ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿ ಬಾಲಕಿಯ ಕೈ ಹಾಗೂ ಮುಖಕ್ಕೆ ಕಚ್ಚಿ ಗಾಯಗೊಂಡಿದೆ. ಕೂಡಲೇ ಅಕ್ಕಪಕ್ಕದಲ್ಲಿದ್ದ ಜನ ನಾಯಿಯನ್ನು ಓಡಿಸಿ ಬಾಲಕಿಯನ್ನು ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net