ಹೊಟ್ಟೆನೋವಿನಿಂದ ಯುವಕ ಆತ್ಮಹತ್ಯೆ

Crime
Crime
Published on

ರಾಣೆಬೆನ್ನೂರ: ಹೊಟ್ಟೆ ನೋವು ತಾಳಲಾರದೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಕನಕದಾಸ ನಗರದಲ್ಲಿ ನಡೆದಿದೆ.

ದಿಲೀಪ್ ಪರಮೇಶಪ್ಪ ಕುರುಬರ (17) ಮೃತ ಯುವಕ.

ಈತ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಇದರಿಂದ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net