ಪ್ರಾಮಾಣಿಕ ಸೇವೆಯಿಂದ ಜನಮನದಲ್ಲಿ ಶಾಶ್ವತ honest service

ಶಿಗ್ಗಾಂವಿ ಪಟ್ಟಣದ ವಿರಕ್ತ ಮಠದ ಸಂಗನಬಸವ ಮಂಗಲ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಮಟ್ಟದ ಸಮಾವೇಶವನ್ನು honest service ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​. ಷಡಕ್ಷರಿ ಉದ್ಘಾಟಿಸಿದರು. ಶಾಸಕ ಯಾಸೀರಖಾನ್​ ಪಠಾಣ, ಹೆಸ್ಕಾಂ ಅಧ್ಯಕ್ಷ ಸೈಯದ್​ ಅಜೀಮಪೀರ್​ ಖಾದ್ರಿ, ಅರುಣ ಹುಡೇದಗೌಡ್ರ ಇತರರಿದ್ದರು.
ಶಿಗ್ಗಾಂವಿ ಪಟ್ಟಣದ ವಿರಕ್ತ ಮಠದ ಸಂಗನಬಸವ ಮಂಗಲ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಮಟ್ಟದ ಸಮಾವೇಶವನ್ನು honest service ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​. ಷಡಕ್ಷರಿ ಉದ್ಘಾಟಿಸಿದರು. ಶಾಸಕ ಯಾಸೀರಖಾನ್​ ಪಠಾಣ, ಹೆಸ್ಕಾಂ ಅಧ್ಯಕ್ಷ ಸೈಯದ್​ ಅಜೀಮಪೀರ್​ ಖಾದ್ರಿ, ಅರುಣ ಹುಡೇದಗೌಡ್ರ ಇತರರಿದ್ದರು.
Published on
ಶಿಗ್ಗಾಂವಿ: ಸಕಾರಿ ನೌಕರರಿಗೆ ಹುದ್ದೆ ಶಾಶ್ವತವಲ್ಲ, ಸಿಕ್ಕಿರುವ ಹುದ್ದೆಯಲ್ಲಿ ಪ್ರಾಮಾಣಿಕ ಸೇವೆ (honest service) ಸಲ್ಲಿಸಿದರೆ ಮಾತ್ರ ಜನಮನದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​. ಷಡಕ್ಷರಿ ಹೇಳಿದರು.
ಪಟ್ಟಣದ ವಿರಕ್ತ ಮಠದ ಸಂಗನಬಸವ ಮಂಗಲ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕು ಮಟ್ಟದ ನೌಕರರ ಸಾಮಾನ್ಯ ಸಭೆ, ಉತ್ತಮ ಸರ್ಕಾರಿ ನೌಕರರ ಪ್ರಶಸ್ತಿ ಪುರಸ್ಕಾರ ಸಮಾರಂಭ, ಸರ್ಕಾರಿ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸರ್ಕಾರಿ ನೌಕರರು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಜನಪ್ರತಿನಿಧಿಗಳು, ವಿರೋಧ ಪದ ಹಾಗೂ ಸಾರ್ವಜನಿಕರ ಒತ್ತಡವೂ ಇರುತ್ತದೆ. ಎಲ್ಲರನ್ನು ಮೆಚ್ಚಿಸುವ ರೀತಿಯಲ್ಲಿ ಸರ್ಕಾರಿ ನೌಕರರು ತಮ್ಮ ಕೆಲಸ ಮಾಡಬೇಕಿದೆ ಎಂದರು.
ಶಾಸಕ ಯಾಸೀರಖಾನ್​ ಪಠಾಣ ಮಾತನಾಡಿ, ಉತ್ತಮ ಆಡಳಿತ, ರಾಜ್ಯದ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದು. ಸಾಮಾಜಿಕ, ಆಥಿರ್ಕ ೇತ್ರದ ಅಸಮತೋಲನ ದೂರವಾಗಬೇಕು. ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಸಿದ್ಧ ಎಂದರು.
ಶಿಗ್ಗಾಂವಿ ತಾಲೂಕು ಮಟ್ಟದ ಉತ್ತಮ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್​ ಯಲ್ಲಪ್ಪ ಗೋಣೆಣ್ಣವರ, ಭಾರತ ಸೇವಾ ಸಂಸ್ಥೆ ಅಧ್ಯ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒ ಮಂಜುನಾಥ ಸಾಳೊಂಕಿ, ಬಿಇಒ ಎಂಬಿ ಅಂಬಿಗೇರ, ಮಲ್ಲೇಶ ಕರಿಗಾರ, ಸಿಡಿಪಿಒ ಗಣೇಶ ಲಿಂಗನಗೌಡ್ರ, ಆರೋಗ್ಯ ಅಧಿ-ಕಾರಿ ಸತೀಶ ಎ.ಆರ್​., ಸರಸ್ವತಿ ಗಜಕೋಶ, ಗೀತಾಂಜಲಿ ತೆಪ್ಪದ, ಬಸವರಾಜ ಎಸ್​., ಮಲ್ಲಿಕಾರ್ಜುನ ಬಳ್ಳಾರಿ, ರಮೇಶ ಹರಿಜನ, ಶಬ್ಬೀರ್​ ಮನಿಯಾರ, ವಿವಿಧ ಜಿಲ್ಲೆಗಳ ನೌಕರರ ಸಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net