

ರಾಣೆಬೆನ್ನೂರ: ಶ್ರೀರಾಮ ನವಮಿ ನಿಮಿತ್ತ ಇಲ್ಲಿಯ ಕೋಟೆಯ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಉತ್ಸವ ಸೇವಾ ಸಮಿತಿ ವತಿಯಿಂದ ಮಾ. 27, 28ರಂದು ಶ್ರೀರಾಮ ದೇವರ ತೊಟ್ಟಿಲೋತ್ಸವ, ಅನ್ನಸಂತರ್ಪಣೆ, ಧರ್ಮಸಭೆ ಹಾಗೂ ಶೋಭಾಯಾತ್ರೆ ಸೇರಿ ವಿವಿಧ ಧಾಮಿರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಶ್ರೀಕಾಂತ ವಿಜಾಪುರ ತಿಳಿಸಿದರು.
ದೇವಸ್ಥಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 27ರಂದು ಬೆಳಗ್ಗೆ 5 ಗಂಟೆಗೆ ಶ್ರೀ ರಾಮ ದೇವರಿಗೆ ಕಾಕಡಾರತಿ, 9 ಗಂಟೆಗೆ ರುದ್ರಾಭಿಷೇಕ ಹಾಗೂ ಶ್ರೀರಾಮ ತಾರಕ ಹೋಮ, ಮಧ್ಯಾಹ್ನ 12 ಗಂಟೆಗೆ ಜನ್ಮೋತ್ಸವ ಹಾಗೂ ತೊಟ್ಟಿಲೋತ್ಸವ ಮತ್ತು ಪ್ರಸಾದ ವಿತರಣೆ, ಸಂಜೆ 6ಕ್ಕೆ ಅಷ್ಟಾವಧಾನ ಕಾರ್ಯಕ್ರಮ, 7 ಗಂಟೆಗೆ ಧರ್ಮಸಭೆ ಜರುಗಲಿದೆ.
ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್, ಅಗಡಿ ಆನಂದವನದ ಗುರುದತ್ತ ಮೂತಿರ್ ಚಕ್ರವತಿರ್ಯವರು ಸಾನ್ನಿಧ್ಯ ವಹಿಸುವರು. ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಪ್ರಕಾಶ ಕೋಳಿವಾಡ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಶ್ರೀರಾಮ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ವಿಜಾಪುರ ಮತ್ತಿತರರು ಪಾಲ್ಗೊಳ್ಳುವರು.
28ರಂದು ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಹಾಗೂ ಸಂಜೆ 5 ಗಂಟೆಗೆ ಶ್ರೀರಾಮನ ಮೂತಿರ್ಯ ಶೋಭಾಯಾತ್ರೆ ಜರುಗಲಿದೆ. ಶ್ರೀರಾಮನ ದೇವಸ್ಥಾನದಿಂದ ಆರಂಭಗೊಳ್ಳುವ ಶೋಭಾಯಾತ್ರೆ, ಶಿಡ್ಲು ಪತ್ರಿಕೆ ರಸ್ತೆ, ಗ್ರಾಮೀಣ ಪೊಲೀಸ್ ಠಾಣೆ ವೃತ್ತ, ಕುರುಬಗೇರಿ ವೃತ್ತ, ಹಲಗೇರಿ ವೃತ್ತ, ಬಸ್ ನಿಲ್ದಾಣ ವೃತ್ತದ ಮೂಲಕ ಪೋಸ್ಟ್ ವೃತ್ತಕ್ಕೆ ಬಂದು ತಲುಪಲಿದೆ.
ಪೋಸ್ಟ್ ವೃತ್ತದಲ್ಲಿ ಕಾಶಿ ಮಾದರಿಯಲ್ಲಿ ಹುಬ್ಬಳ್ಳಿಯ ಶಿವ ಅವರ ತಂಡದವರಿಂದ ಶ್ರೀರಾಮ ಆರತಿ ಕಾರ್ಯಕ್ರಮ ನಡೆಯುವುದು. ಮಾಜಿ ಸಚಿವ ಬಿ. ಶ್ರೀರಾಮಲು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶ್ರೀರಾಮನವಮಿ ನಿಮಿತ್ತ ಎರಡು ದಿನ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಲಿದೆ ಎಂದು ತಿಳಿಸಿದರು.
ಪ್ರಮುಖರಾದ ವೆಂಕಟೇಶ ವಿಜಾಪುರ, ಉಮೇಶ ಕಾಕಿ, ವೀರೇಶ ಲಮಾಣಿ, ಬಸು ರಾಜನಹಳ್ಳಿ, ಹನುಮಂತ ಚಿಕ್ಕಣ್ಣನವರ, ಸಿದ್ದೇಶ ಮಣ್ಣೂರ, ಜಗದೀಶ ಕಾಕೋಳ, ರವಿ ಲಮಾಣಿ, ಮಲ್ಲಪ್ಪ ಪೆತಪ್ಪನವರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.