ಸ್ಥಳಕ್ಕಾಗಮಿಸಿದ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಜಲಿ, ಶ್ರೀಧರ ದಾಸರ ಅವರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಂಕಾಪುರ ಹೋಬಳಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ದಾಸ್ತಾನಿದೆ. ರೈತರು ನೂಕುನುಗ್ಗಲಿಗೆ ಆಸ್ಪದ ಇಲ್ಲದಂತೆ ಸಮಾಧಾನದಿಂದ ಬೀಜ ಖರೀದಿ ಮಾಡಬೇಕು. ಸಕಲ ಸಿದ್ಧತೆ ಮಾಡಿಕೊಂಡು ಮೇ 21ರಿಂದ ಬೀಜ ವಿತರಣೆ ಆರಂಭಿಸಲಾಗುವುದು. ರೈತರು ಸಹಕರಿಸಬೇಕು ಎಂದು ತಿಳಿಸಿದರು.