ಜಗತ್ತಿನ ಎಲ್ಲ ಸಮಸ್ಯೆಗೆ ವಚನ ಸಾಹಿತ್ಯದಲ್ಲಿದೆ ಪರಿಹಾರ Vachana literature

ಹಾನಗಲ್ಲಿನಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ Vachana literature ಸಮ್ಮೇಳನವನ್ನು ಡಾ.ಸಿ. ಸೋಮಶೇಖರ ಉದ್ಘಾಟಿಸಿದರು. ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ನೀಲಮ್ಮ ಉದಾಸಿ ಇದ್ದರು.
ಹಾನಗಲ್ಲಿನಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ Vachana literature ಸಮ್ಮೇಳನವನ್ನು ಡಾ.ಸಿ. ಸೋಮಶೇಖರ ಉದ್ಘಾಟಿಸಿದರು. ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ನೀಲಮ್ಮ ಉದಾಸಿ ಇದ್ದರು.
Published on
ಹಾನಗಲ್ಲ: ಸಪ್ತ ಸೂತ್ರಗಳು ಬಸವಣ್ಣನವರು ವಿಶ್ವಕ್ಕೆ ಕೊಟ್ಟ ನೈತಿಕ ಸಂವಿಧಾನವಾಗಿದೆ. ಜಗತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ (Vachana literature) ಪರಿಹಾರವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ನ ರಾಜ್ಯಾಧ್ಯಕ್ಷ ಡಾಸಿ.ಸೋಮಶೇಖರ ಹೇಳಿದರು.
ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದ್ದು, ಅವುಗಳ ಮರುಸ್ಥಾಪನೆಯಾಗಬೇಕಿದೆ. ಅಧಿಕಾರ, ಸಂಪತ್ತಿನ ಆಕರ್ಷಣೆಗಿಂತ ನಿರಹಂಕಾರ ಭಾವದಿಂದ ಮೌಲ್ಯಗಳ ಬಲವರ್ಧನೆಗೆ ಮಹತ್ವ ನೀಡಬೇಕಿದೆ ಎಂದರು.
ದಯಾಭಾವನೆ ನಮ್ಮನ್ನು ದ್ವೇಷ ಮತ್ತು ಅಸೂಯೆಯಿಂದ ಮುಕ್ತಗೊಳಿಸುತ್ತದೆ. ಅಂತಃಕರಣವಿಲ್ಲದ ಧರ್ಮ ಧರ್ಮವೇ ಅಲ್ಲ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಮಕ್ಕಳಿಗೆ ಮೊಬೈಲ್ ಕೊಡುವ ಬದಲು ವಚನಗಳ ಪುಸ್ತಕ ಕೊಡಬೇಕು. ಬಸವ ತತ್ವ ಪಾಲನೆಯಿಂದ ಶಾಂತಿ, ಸಮಾಧಾನ ದೊರಕಲಿದ್ದು, ಸಮಾನತೆ ಸಾಧ್ಯವಾಗುತ್ತದೆ. ಕಾಯಕವೇ ಕೈಲಾಸ ಎಂಬುದು ಬರಿ ಮಾತಾಗದೇ ಕಾರ್ಯರೂಪಕ್ಕೆ ತರೋಣ ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಮಾತನಾಡಿ, ಶರಣ ಸಾಹಿತ್ಯದ ನಿಜವಾದ ರುಚಿಯನ್ನು ಸಮಾಜಕ್ಕೆ ತಲುಪಿಸಬೇಕು. ಮಕ್ಕಳಿಗಾಗಿ ವಚನ ಸಾಹಿತ್ಯದ ಪ್ರಸಾರ ಅತ್ಯವಶ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಮೂಡಿಸಬೇಕಾಗಿದೆ. ಸಂಸ್ಕಾರವಂತರನ್ನಾಗಿ ಬೆಳೆಸಬೇಕಾಗಿದೆ. ಮುಂದಿನ ವರ್ಷ ಜಿಲ್ಲಾ ಮಟ್ಟದ ಮಕ್ಕಳ ವಚನ ಸಾಹಿತ್ಯ ಸಮ್ಮೇಳನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದತ್ತಿನಿಧಿ: ಇದೇ ಸಂದರ್ಭದಲ್ಲಿ ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಒಂದು ಲಕ್ಷ ರೂ. ದತ್ತಿನಿಧಿ ನೀಡುವುದಾಗಿ ಘೊಷಿಸಿದರು.
ಅಕ್ಕಿಆಲೂರ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಸಮ್ಮೇಳನಾಧ್ಯಕ್ಷೆ ನೀಲಮ್ಮ ಉದಾಸಿ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ, ಶಸಾಪ ರಾಜ್ಯ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಶಸಾಪ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ಕೊಟ್ರೇಶ ಬಿಜಾಪೂರ, ಎಚ್.ಎಚ್. ರವಿಕುಮಾರ, ಗುರುನಾಥ ಗವಾಣಿಕರ, ಎಸ್.ಸಿ. ಕಲ್ಲನಗೌಡ್ರ ಅತಿಥಿಗಳಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net