ಹಾವು ಕಚ್ಚಿದ್ದರಿಂದ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

Crime
Crime
Published on

ಹಾವೇರಿ: ಹಾವು ಕಚ್ಚಿದ ಕಾಲು ಗಟ್ಟಿಯಾಗಿದ್ದರಿಂದ ಮನನೊಂದು ವೃದ್ಧೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಟೇನಹಳ್ಳಿಯಲ್ಲಿ ನಡೆದಿದೆ.

ನಮಾಜಬಿ ಶರೀಪಸಾಬ ನದಾಫ್ (60) ಮೃತ ವೃದ್ಧೆ.

ಇವರಿಗೆ ಒಂದು ವರ್ಷದ ಹಿಂದೆ ಹಾವು ಕಚ್ಚಿತ್ತು. ಇದರಿಂದ ಕಾಲು ಗಟ್ಟಿಯಾಗಿ ತೊಂದರೆ ಉಂಟಾಗಿತ್ತು. ಇದರಿಂದ ಮನನೊಂದು ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net