ಜೀವನದ ಉನ್ನತಿಗೆ ಸಂಸ್ಕಾರವೂ ಮುಖ್ಯ

ಹಂಸಭಾವಿಯ ಶಿವಯೋಗೀಶ್ವರ ಆಶ್ರಮದಲ್ಲಿ ನಡೆದ ಹಾಲೇವಾಡಡಿಮಠ ಗುರುಕುಲ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವವನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ರಟ್ಟಿಹಳ್ಳಿ ಶಿವಲಿಂಗ ಶಿವಾಚಾರ್ಯರು, ರಾಣೆಬೆನ್ನೂರು ಶಿವಯೋಗಿ ಶಿವಾಚಾರ್ಯರು ಇತರರಿದ್ದರು.
ಹಂಸಭಾವಿಯ ಶಿವಯೋಗೀಶ್ವರ ಆಶ್ರಮದಲ್ಲಿ ನಡೆದ ಹಾಲೇವಾಡಡಿಮಠ ಗುರುಕುಲ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವವನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ರಟ್ಟಿಹಳ್ಳಿ ಶಿವಲಿಂಗ ಶಿವಾಚಾರ್ಯರು, ರಾಣೆಬೆನ್ನೂರು ಶಿವಯೋಗಿ ಶಿವಾಚಾರ್ಯರು ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಹಂಸಭಾವಿ
ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಜೀವನದ ಉನ್ನತಿಗೆ ಶಿಕ್ಷಣದೊಂದಿಗೆ ಸಂಸ್ಕಾರವು ಮುಖ್ಯ. ಜೀವನ ವಿಕಾಸಕ್ಕೆ ಆದರ್ಶ ಶಿಕ್ಷಣದ ಅಗತ್ಯವಿದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಹಂಸಭಾವಿ ಶ್ರೀ ಶಿವಯೋಗೀಶ್ವರ ಆಶ್ರಮದಲ್ಲಿ ಮಂಗಳವಾರ ಶ್ರೀ ಹಾಲೇವಾಡಿಮಠದ ಗುರುಕುಲ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಸದ್ಭಾವನೆಗಳು ಬೆಳೆದು ಬರುವ ಅವಶ್ಯಕತೆಯಿದೆ. ಮನುಷ್ಯನಲ್ಲಿ ಬುದ್ಧಿಶಕ್ತಿ ಬೆಳೆಯುತ್ತದೆ. ಆದರೆ, ಭಾವನೆಗಳು ಮೂಲವಾಗಿ ಬೆಳೆಯುತ್ತಿಲ್ಲ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ ಧರ್ಮದಿಂದ ಮನುಷ್ಯನ ಭಾವನೆಗಳು ಬೆಳೆಯುತ್ತವೆ. ಬುದ್ಧಿಶಕ್ತಿ ಮತ್ತು ಭಾವನೆಗಳೆರಡೂ ಬೆಳೆದು ಬಂದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಯುವ ಜನಾಂಗಕ್ಕೆ ಇತಿಹಾಸದ ಅರಿವು ಅಗತ್ಯ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು. ಹೆತ್ತ ತಾಯಿ-ತಂದೆ ಮತ್ತು ಗುರುವಿನ ಋಣ ತೀರಿಸಲಾಗದು. ಬೆಳಗುವ ಜ್ಯೋತಿ ಜ್ಞಾನದ ಸಂಕೇತ. ವಿನಯವಿಲ್ಲದ ವಿದ್ಯೆ ಪ್ರಜ್ಞೆಯಿಲ್ಲದ ಪ್ರತಿಭೆ ವ್ಯರ್ಥ. ಮನುಷ್ಯತ್ವದ ಪ್ರಾಪ್ತಿಗಾಗಿ ಶಿಕ್ಷಣ ಅಗತ್ಯ. ಯಾವುದೇ ವಿಶ್ವವಿದ್ಯಾಲಯ ಕಲಿಸದೇ ಇರುವ ಜ್ಞಾನವನ್ನು ಜೀವನಾನುಭವ ಕಲಿಸಿಕೊಡುತ್ತದೆ ಎಂಬುದನ್ನು ಮರೆಯಲಾಗದು. ಹಂಸಭಾವಿಯಲ್ಲಿ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಅವರು 25 ವರುಷಗಳ ಹಿಂದೆ ಗುರುಕುಲ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುತ್ತಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ. ಈ ವಿದ್ಯಾ ಸಂಸ್ಥೆ ಇಂದು ರಜತ ಮಹೋತ್ಸವ ಆಚರಿಸುತ್ತಿದೆ. ಮುಂದೊಂದು ದಿನ ಸುವರ್ಣ ಮಹೋತ್ಸವ ಆಚರಿಸುವ ಸೌಭಾಗ್ಯ ಪ್ರಾಪ್ತವಾಗಲೆಂದು ಶುಭ ಹಾರೈಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಾಲೇವಾಡಿ ಮಠದ ಗುರುಕುಲ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಉದ್ಘಾಟಿಸಿದ ಭಾಗ್ಯ ಇಂದು ನನ್ನದಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಶಿಕ್ಷಣದಿಂದ ಮನುಷ್ಯ ಜೀವನ ಉಜ್ವಲಗೊಳ್ಳುತ್ತದೆ. ವಿದ್ಯೆ ಯಾರೂ ಕದಿಯಲಾರದ ವಸ್ತು. ಎಲ್ಲರೂ ಸಾಕ್ಷರರಾಗಿ ಬಾಳಲು ಪ್ರಯತ್ನಿಸಬೇಕಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದ ನಾನು ಧನ್ಯನೆಂದರು.
ರಟ್ಟಿಹಳ್ಳಿ ಶಿವಲಿಂಗ ಶಿವಾಚಾರ್ಯರು, ರಾಣೆಬೆನ್ನೂರು ಶಿವಯೋಗಿ ಶಿವಾಚಾರ್ಯರು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯರು, ಮಡ್ಲೂರು ಮುರುಘರಾಜೇಂದ್ರ ಸ್ವಾಮಿಗಳು, ಬಳಸಗೋಡು ಗುರು ನೀಲಕಂಠ ಶಿವಾಚಾರ್ಯರು ಪಾಲ್ಗೊಂಡಿದ್ದರು. ಲಕ್ಷ್ಮೇಶ್ವರದ ಡಾ.ಗಂಗಾಧರಯ್ಯ ಹಾಲೇವಾಡಿಮಠ ಅವರಿಗೆ ವಿಶೇಷ ಸನ್ಮಾನ ಜರುಗಿತು. ಜಿ.ಎಸ್.ಯು.ಅಕಾಡೆಮಿ ಅಧ್ಯಕ್ಷರಾದ ಹಂಸಭಾವಿಯ ಜ್ಯೋತಿ ಪಿ. ಹಾಲೇವಾಡಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಲೇವಾಡಿಮಠ ರಜತ ಮಹೋತ್ಸವ ಆಚರಿಸಲು ಅಂದಿನಿಂದ ಇಂದಿನವರೆಗೆ ಸಹಕಾರ ನಿಡಿದ ಮಹನಿಯರನ್ನು ಸನ್ಮಾನಿಸಲಾಯಿತು. ಶಿವಲಿಂಗಯ್ಯ ಹಾಲೇವಾಡಿಮಠ ಲಕ್ಷ್ಮೇಶ್ವರ, ಬ್ಯಾಡಗಿ ರಾಜಶೇಖರಯ್ಯ ಹಾಲೇವಾಡಿಮಠ, ರಾಜಶೇಖರ ಹುಚಗೊಮಡ್ರ, ಸಂಜೀವಯ್ಯ ಕಬ್ಬಿಣಕಂತಿಮಠ, ಅಜ್ಜಯ್ಯಸ್ವಾಮಿ ಆರಾಧ್ಯಮಠ, ಗಿರೀಶ ಬಾರ್ಕಿ, ಕರಬಸಯ್ಯ ಬಸರಿಹಳ್ಳಿಮಠ, ಉಮೇಶ ಬಾರ್ಕಿ, ಲಲಿತಾ ವಾಲಿ, ಬಸನಗೌಡ ಬಿರಾದಾರ, ಬಸವರಾಜ ಪೂಜಾರ, ಎಸ್.ಹನುಮಂತಪ್ಪ ಉಪಸ್ಥಿತರಿದ್ದರು. ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net