Spiritual ಮೌನದಿಂದ ಆತ್ಮಬಲ, ಆಧ್ಯಾತ್ಮಿಕ ಚೈತನ್ಯ ವೃದ್ಧಿ

ಗುತ್ತಲ ಸಮೀಪದ ಮಣ್ಣೂರ ಗ್ರಾಮದಲ್ಲಿ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ Addapallakki ಮಹೋತ್ಸವ ಜರುಗಿತು.
ಗುತ್ತಲ ಸಮೀಪದ ಮಣ್ಣೂರ ಗ್ರಾಮದಲ್ಲಿ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ Addapallakki ಮಹೋತ್ಸವ ಜರುಗಿತು.
Published on
ಗುತ್ತಲ: ಮೌನಾನುಷ್ಠಾನವು ಆತ್ಮಶುದ್ಧಿ, ಆತ್ಮ ಸಾಕ್ಷಾತ್ಕಾರ ಹಾಗೂ ಲೋಕಕಲ್ಯಾಣದ ಮಾರ್ಗವಾಗಿದೆ ಎಂದು ನೆಗಳೂರು ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಮಣ್ಣೂರು ಗ್ರಾಮದ ಗದಿಗೇಶ್ವರ ವಿರೂಪಾಕ್ಷೇಶ್ವರ ತಪೋವನ ಮಠದಲ್ಲಿ ಬುಧವಾರ ಆಯೋಜಿಸಿದ್ದ 13ನೇ ವರ್ಷದ ಶಿವಯೋಗ ಮೌನಾನುಷ್ಠ್ಠಾನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ಮೌನವು ಮಾನಸಿಕ ನೆಮ್ಮದಿ, ಆತ್ಮಬಲ ಹಾಗೂ ಆಧ್ಯಾತ್ಮಿಕ Spiritual ಚೈತನ್ಯವನ್ನು ವೃದ್ಧಿಸುತ್ತದೆ. ಮೌನದಿಂದ ವ್ಯಕ್ತಿಯ ಚಿಂತನೆ ಶುದ್ಧಗೊಳ್ಳುವ ಜತೆಗೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದದ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಸನಾತನ ಧರ್ಮದ ರಕ್ಷಣೆ, ಭಕ್ತರ ಶ್ರೇಯೋಭಿವೃದ್ಧಿ, ದೇಶದ ರೈತರ ಸಂಕಷ್ಟ ನಿವಾರಣೆಯಾಗಿ ಸಮೃದ್ಧ ಬೆಳೆ ಬೆಳೆಯಲಿ, ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ ದೊರೆಯಲಿ, ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರಿಗೆ ಶಕ್ತಿ, ಧೈರ್ಯ ಮತ್ತು ಆಯುಷ್ಯ ಲಭಿಸಲಿ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಶಿವಯೋಗ ಮೌನಾನುಷ್ಠಾನ ಕೈಗೊಳ್ಳಲಾಗಿತ್ತು ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಶ್ರೀಗಳು ಲೋಕಕಲ್ಯಾಣ ಹಾಗೂ ಸಮಸ್ತ ಭಕ್ತಾದಿಗಳ ಶ್ರೇಯಸ್ಸಿಗಾಗಿ ಕೈಗೊಂಡಿರುವ ಮೌನ ತಪಸ್ಸು ಸಮಾಜಕ್ಕೆ ಆದರ್ಶವಾಗಿದ್ದು, ಧರ್ಮ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರೇರಣೆಯಾಗಿದೆ ಎಂದರು.
ನಂತರ ಅನ್ನ ದಾಸೋಹ ಜರುಗಿತು. ಗುರುಮಹಾಂತಯ್ಯ ಆರಾಧ್ಯಮಠ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ನಿವೃತ್ತ ಉಪ ತಹಸೀಲ್ದಾರ್ ವಿ.ಎಂ. ಹಿರೇಮಠ, ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಪಿಐಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗುರುನಾಥಯ್ಯ ಮಳ್ಳೂರಮಠ (ಕಮತರ), ನರೇಶ ಮಂತಟ್ಟಿ, ಕೆ.ಎಂ. ಮೈದೂರ, ವೆಂಕಟೇಶ ನಾರಾಯಣಿ, ಸಾವಿರಾರು ಭಕ್ತರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ವೈಭವದ ಅಡ್ಡಪಲ್ಲಕ್ಕಿ ಉತ್ಸವ: ಗ್ರಾಮದಲ್ಲಿ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಜರುಗಿತು. ಗ್ರಾಮದ ಪ್ರವೇಶ ದ್ವಾರದಿಂದ ಪ್ರಾರಂಭಗೊಂಡ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶ್ರೀಮಠದ ಆವರಣ ತಲುಪಿತು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ , ಕಳಸ ಆರತಿ ಹಿಡಿದು ಸಾಗಿದರು. ನಂದಿಕೋಲು ಕುಣಿತ, ಸಮ್ಮಾಳ, ಗುರುಶಾಂತೇಶ್ವರ ಭಜನಾ ಮೇಳದವರ ಭಜನೆ ಗಮನ ಸೆಳೆದವು. ಶ್ರೀಗಳ ಅಡ್ಡಪಲ್ಲಕ್ಕಿ ಸಾಗುವ ಮಾರ್ಗದಲ್ಲಿ ಭಕ್ತರು ಪುಷ್ಪ ವೃಷ್ಟಿ ಮಾಡಿ ಭಕ್ತಿ ಸರ್ಮಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net