ಶಿಗ್ಗಾಂವ ಬಸ್ ನಿಲ್ದಾಣದ ಶೌಚಗೃಹ ಸಾರಿಗೆ ಸಂಸ್ಥೆ ವಶಕ್ಕೆ

ಶಿಗ್ಗಾಂವ ಬಸ್ ನಿಲ್ದಾಣದ ಶೌಚಗೃಹವನ್ನು ಸೋಮವಾರ ಡಿಟಿಒ ಅಶೋಕ ಪಾಟೀಲ ನೇತೃತ್ವದ ತಂಡ ಸಾರಿಗೆ ಸಂಸ್ಥೆ ವಶಕ್ಕೆ ಪಡೆಯಿತು. ಕೆ.ಆರ್.ನಾಯಕ, ಎಸ್.ಆರ್.ಹೆಗಡೆ, ಕೃಷ್ಣಾ  ರಾಹುತನಕಟ್ಟಿ, ಮುನ್ನಾಸಾಹೇಬ, ಇತರರಿದ್ದರು.
ಶಿಗ್ಗಾಂವ ಬಸ್ ನಿಲ್ದಾಣದ ಶೌಚಗೃಹವನ್ನು ಸೋಮವಾರ ಡಿಟಿಒ ಅಶೋಕ ಪಾಟೀಲ ನೇತೃತ್ವದ ತಂಡ ಸಾರಿಗೆ ಸಂಸ್ಥೆ ವಶಕ್ಕೆ ಪಡೆಯಿತು. ಕೆ.ಆರ್.ನಾಯಕ, ಎಸ್.ಆರ್.ಹೆಗಡೆ, ಕೃಷ್ಣಾ ರಾಹುತನಕಟ್ಟಿ, ಮುನ್ನಾಸಾಹೇಬ, ಇತರರಿದ್ದರು.
Published on
ಹಾವೇರಿ: ಜಿಲ್ಲೆಯ ಶಿಗ್ಗಾಂವ ಬಸ್ ನಿಲ್ದಾಣದಲ್ಲಿನ ಗುತ್ತಿಗೆದಾರರು ಅನಧಿಕೃತವಾಗಿ ನಿರ್ವಹಿಸುತ್ತಿದ್ದ ಶೌಚಗೃಹವನ್ನು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಸೋಮವಾರ ವಶಕ್ಕೆ ಪಡೆಯಿತು. 
ಶಿಗ್ಗಾಂವ ಬಸ್ ನಿಲ್ದಾಣದಲ್ಲಿ 2019ರ ಜೂನ್ 27ರಿಂದ ಕಳೆದ 7 ವರ್ಷ 2 ತಿಂಗಳಿನಿಂದ ಅನಧಿಕೃತವಾಗಿ ಶೌಚಗೃಹ ಗುತ್ತಿಗೆ ಕಾರ್ಯ ನಿರ್ವಹಿಸುತ್ತಿದ್ದರು. ಗುತ್ತಿಗೆದಾರರಾದ ವಿಜಯಲಕ್ಷ್ಮೀ ಬಳ್ಳಾರಿ ಹಾಗೂ ಬಾಬಕ್ಕ ಬಳ್ಳಾರಿ ಎಂಬುವರು ಅನಧಿಕೃತವಾಗಿ ಗುತ್ತಿಗೆ ನಡೆಸುತ್ತಿದ್ದರು. ಸಂಸ್ಥೆಗೆ ಬಾಡಿಗೆ ಭರಿಸದೆ, ತೆರವುಗೊಳಿಸಲು ಹೋಗಿದ್ದ ಅಧಿಕಾರಿಗಳು, ಪೊಲೀಸರಿಗೂ ಬಗ್ಗದೆ ತಲೆನೋವಾಗಿ ಪರಿಣಮಿಸಿದ್ದರು. 
ಜತೆಗೆ ಸಾರಿಗೆ ಸಂಸ್ಥೆಯ ವಿರುದ್ಧವೇ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅನಧಿಕೃತ ಗುತ್ತಿಗೆದಾರರನ್ನು ತೆರವುಗೊಳಿಸುವಂತೆ ಇತ್ತೀಚೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ವಿಭಾಗೀಯ ಸಾರಿಗೆ ಅಧಿಕಾರಿ (ಡಿಟಿಒ) ಅಶೋಕ ಪಾಟೀಲ ನೇತೃತ್ವದ ತಂಡ ಸೋಮವಾರ ಶೌಚಗೃಹವನ್ನು ವಶಕ್ಕೆ ಪಡೆಯಿತು. ಭದ್ರತೆಗಾಗಿ ಇಬ್ಬರು ಸಿಬ್ಬಂದಿ ನೇಮಿಸಿದರು.
ಕಾರ್ಯಾಚರಣೆ ವೇಳೆ ವಿಭಾಗೀಯ ತಾಂತ್ರಿಕ ಶಿಲ್ಪಿ ಕೆ.ಆರ್.ನಾಯಕ, ಸಂಸ್ಥೆಯ ವಕೀಲ ಎಸ್.ಆರ್.ಹೆಗಡೆ, ಶಿಗ್ಗಾಂವ ಘಟಕ ವ್ಯವಸ್ಥಾಪಕ ಕೃಷ್ಣಾ  ರಾಹುತನಕಟ್ಟಿ, ಸವಣೂರು ಘಟಕದ ಘಟಕ ವ್ಯವಸ್ಥಾಪಕ ಮುನ್ನಾಸಾಹೇಬ, ವಿಭಾಗದ ಸಹಾಯಕ ಕಾನೂನು ಅಧಿಕಾರಿ ಕೀರ್ತಿ, ವಿಭಾಗೀಯ ಭದ್ರತಾ ನಿರೀಕ್ಷಕ ವಾರದ ಕುಕನೂರು, ಮಂಜು ಗೊಂದಾಳೆ, ಕೋರ್ಟ್ ಬಿಲೀಫ್ ಮಂಜುನಾಥ ಗೌಡರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net