ಕುರಿಗಳಿಗೆ ನೀರು ಕುಡಿಸಲು ಹೋದ ಬಾಲಕ ಸಾವು

Crime
Crime
Published on

ಬ್ಯಾಡಗಿ: ಕುರಿಗಳಿಗೆ ನೀರು ಕುಡಿಸಲು ಹೋದ ಬಾಲಕ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹಿರೇಹಳ್ಳಿಯ ದೊಡ್ಡಕೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬೆಳಲಗೇರೆ ಗ್ರಾಮದ ಉಮೇಶ ದೊಡ್ಡಪ್ಪ ಘಾಜಾಪುರ (13) ಮೃತ ಬಾಲಕ.

ಈತ ಕುಟುಂಬದವರೊಂದಿಗೆ ಕುರಿಗಳ ಜತೆ ಬಂದಾಗ ಕುರಿಗಳು ನೀರು ಕುಡಿಯಲು ದೊಡ್ಡಕೆರೆಗೆ ಹೋಗಿವೆ. ಆಗ ಬಾಲಕನು ಅವುಗಳ ಹಿಂದೆ ಹೋಗಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net