2.12 ಲಕ್ಷ ರೂ. ಮೌಲ್ಯದ ಮೇಕೆಗಳ ಕಳ್ಳತನ

Crime
Crime
Published on

ರಾಣೆಬೆನ್ನೂರ: ಕುರಿ ಶೆಡ್ಡಿಗೆ ನುಗ್ಗಿದ ಕಳ್ಳರ ತಂಡವೊಂದು 2.12 ಲಕ್ಷ ರೂ. ಮೌಲ್ಯದ 10 ಮೇಕೆ, 13 ಮೇಕೆ ಮರಿ ಹಾಗೂ 1 ಕುರಿಯನ್ನು ಕಳ್ಳತನ ಮಾಡಿಕೊಂಡು ಹೋದ ಟನೆ ತಾಲೂಕಿನ ದೇವರಗುಡ್ಡ ಬಳಿ ನಡೆದಿದೆ.

ನಾಗರಾಜ ರೇವಣಸಿದ್ದಪ್ಪ ಸಾಲಗೇರಿ (36) ಎಂಬುವರ ಮೇಕೆಗಳನ್ನು ಕಳ್ಳತನ ಮಾಡಿರುವುದು.

ಇವರ ಕುರಿ ಶೆಡ್ಡಿಗೆ ರಾತ್ರಿ ಸಮಯದಲ್ಲಿ ನುಗ್ಗಿದ ಕಳ್ಳರು ಮೇಕೆ, ಕುರಿ ಹಾಗೂ ಮೇಕೆ ಮರಿಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net