ಶಾಸಕರು ಪ್ರತಿಷ್ಠಾನ ಮತ್ತು ಪ್ರಾಧಿಕಾರದ ನಡುವಿನ ವ್ಯತ್ಯಾಸ ಅರಿಯದೆ ನಿತ್ಯವು ಪ್ರಾಧಿಕಾರದ ಕನವರಿಕೆಯಲ್ಲಿದ್ದಾರೆ. ನಂಜುಂಡಪ್ಪ ವರದಿಯ ಪ್ರಕಾರ 2008ರ ಪೂರ್ವದಲ್ಲಿ ಶಿಗ್ಗಾಂವಿ&ಸವಣೂರ ೇತ್ರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. 2008ರಲ್ಲಿ ಬಸವರಾಜ ಬೊಮ್ಮಾಯಿ ಅವರು ಶಾಸಕರಾದ ನಂತರ ಸಾವಿರಾರು ಕೋಟಿ ಅನುದಾನ ತರುವ ಮೂಲಕ ೇತ್ರದಲ್ಲಿನ ರಸ್ತೆ, ಮಂದಿರ, ಮಜೀದ್, ಆಸ್ಪತ್ರೆ, ಶಾಲಾ-ಕಾಲೇಜ್ ಅಭಿವೃದ್ಧಿಪಡಿಸಿದ್ದಾರೆ. ನೆರೆಹಾವಳಿಯಲ್ಲಿ ಸೂರು ಕಳೆದುಕೊಂಡವರಿಗೆ ಸೂರು, ಕುಡಿಯುವ ನೀರು, ಬೀದಿದೀಪ, ಶಿಗ್ಗಾಂವ, ಸವಣೂರ, ಬಂಕಾಪುರ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು, ರೈತರ ಅನುಕೂಲಕ್ಕಾಗಿ ಏತ ನೀರಾವರಿ ಯೋಜನೆ ಕಲ್ಪಿಸಿದ ಕೀತಿರ್ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.