ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 3.15 ಲಕ್ಷ ರೂ. ದೋಚಿದ ಖದೀಮ

Crime
Crime
Published on

ರಾಣೆಬೆನ್ನೂರ: ಪರಿಚಯದವರಂತೆ ಮಾತನಾಡಿಸಿದ ಖದೀಮನೊಬ್ಬ ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 3.15 ಲಕ್ಷ ರೂ.ಅನ್ನು ದೋಚಿರುವ ಟನೆ ನಗರದ ಯೂನಿಯನ್ ಬ್ಯಾಂಕ್ ಎದುರು ಗುರುವಾರ ನಡೆದಿದೆ.

ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ಯುವಕ ಪ್ರವಿಣ ಕೊಂಡಜ್ಜಿ ಎಂಬುವರ ಹಣ ದೋಚಿರುವುದು.

ಇವರು ಬ್ಯಾಂಕಿನ ವ್ಯವಹಾರ ಸಲುವಾಗಿ 3.15 ಲಕ್ಷ ರೂ. ತೆಗೆದುಕೊಂಡು ಸ್ಕೂಟಿಯ ಡಿಕ್ಕಿಯಲ್ಲಿಟ್ಟುಕೊಂಡು ಬಂದಿದ್ದರು. ಬ್ಯಾಂಕ್ ಎದುರು ಹಣವನ್ನು ಡಿಕ್ಕಿಯಿಂದ ಹೊರಗೆ ತೆಗೆದು ನೋಡಿ ಮತ್ತೇ ಅದರಲ್ಲಿಯೆ ಇಟ್ಟಿದ್ದರು. ಇದನ್ನು ಗಮನಿಸಿದ ಖದೀಮ ಪರಿಚಯವಂತೆ ನಟನೆ "ಹೇಗಿದ್ದೀರಿ ಪ್ರವಿಣ' ಎಂದು ಮಾತನಾಡಿಸಿದ್ದಾನೆ.

ಆತನೊಂದಿಗೆ ಪ್ರವಿಣ ಮಾತನಾಡಿ ಬ್ಯಾಂಕಿನೊಳಗೆ ಹೋಗಿದ್ದಾರೆ. ಆಗ ಖದೀಮ ಡಿಕ್ಕಿ ಕೀ ಮುರಿದು ಹಣ ದೋಚಿ ಪರಾರಿಯಾಗಿದ್ದಾನೆ. ಪ್ರವಿಣ ಬ್ಯಾಂಕ್ನಿಂದ ಹೊರ ಬಂದು ನೋಡಿದಾಗ ಹಣ ಲೂಟಿ ಮಾಡಿರುವುದು ತಿಳಿದು ಬಂದಿದೆ. ಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net