ಸಂಜನಾ ನಂಬಿ 5.55 ಲಕ್ಷ ರೂ. ಕಳೆದುಕೊಂಡ ಡಿಲೆವರಿ ಬಾಯ್

Crime
Crime
Published on

ಹಾವೇರಿ: ಮೆಸೆಂಜರ್ ಖಾತೆಯಲ್ಲಿ ಸಂಜನಾ ಎಂದು ಪರಿಚಯ ಮಾಡಿಕೊಂಡ ಪರಿಚಿತ ಮಹಿಳೆಯೊಬ್ಬಳು ಸ್ಟಾರ್ಚೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುವುದು ಎಂದು ನಂಬಿಸಿ ಡಿಲೆವರಿ ಬಾಯ್ 5.55 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಗ್ಗಾಂವಿ ಪಟ್ಟಣದ ಮಂಜುನಾಥ ಬಂಕಾಪುರ ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ಫೆಸ್ಬುಕ್ ಪೇಜ್ನ ಮೆಸೆಂಜರ್ನಲ್ಲಿ ಸಂಜನಾ ಎಂಬ ಮಹಿಳೆ ಪರಿಚಯ ಮಾಡಿಕೊಂಡು ಸ್ಟಾರ್ಚೈನ್ನಲ್ಲಿ ಟ್ರೇಡಿಂಗ್ ಮಾಡಿದರೆ ಒಳ್ಳೆಯ ಆದಾಯ ಬರಲಿದೆ ಎಂದು ನಂಬಿಸಿ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net