RTC Conditions ರೈತರಿಗೆ ಶಾಪವಾದ ಪಹಣಿ ಷರತ್ತು

RTC Conditions
RTC Conditions
Published on
ಸವಣೂರ: ಪಟ್ಟಣದಲ್ಲಿ ಎರಡೂವರೆ ದಶಕಗಳ ಹಿಂದೆ ನಡೆದ ಪ್ರತಿಭಟನೆಯ ಕಿಚ್ಚಿನಲ್ಲಿ ಭೂ ದಾಖಲೆಗಳು ಸುಟ್ಟು ಹೋಗಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದರೆ, ಇನ್ನೊಂದೆಡೆ ಪಹಣಿ ಪತ್ರಿಕೆಯ ಸಂಕೀರ್ಣ ಷರತ್ತುಗಳು (RTC Conditions) ಅನ್ನದಾತನ ಬದುಕಿಗೆ ಕಂಟಕವಾಗಿ ಪರಿಣಮಿಸಿವೆ.
2000ರಲ್ಲಿ ನೀರಿಗಾಗಿ ನಡೆದ ಪ್ರತಿಭಟನೆಯಲ್ಲಿ ಸುಟ್ಟುಹೋದ ದಾಖಲೆಗಳ ಸಮಸ್ಯೆಯ ಬೆನ್ನಲ್ಲೇ ರೈತರು ಇದೀಗ ಪಹಣಿ ಪತ್ರಿಕೆಯ ಕಾಲಂ 6, 9, 11 ಮತ್ತು 12ರ ಸಂಕಷ್ಟ ಎದುರಿಸುತ್ತಿದ್ದಾರೆ. ಸುಮಾರು 70 ವರ್ಷಗಳ ಹಿಂದಿನ ಹಳೆಯ ಷರತ್ತುಗಳನ್ನು ತಾಲೂಕು ಆಡಳಿತ ಇಂದಿಗೂ ಮುಂದುವರಿಸುತ್ತಿರುವುದು ರೈತರ ಸ್ಥಿತಿಯನ್ನು ದಯನೀಯಗೊಳಿಸಿದೆ.
ಮುಖ್ಯವಾಗಿ ಕಾಲಂ ನಂ. 9ರಲ್ಲಿ ಸರ್ಕಾರ ಎಂದು ದಾಖಲಾಗಿರುವುದು ಭೂಸ್ವಾಮ್ಯದ ಬಗ್ಗೆ ದೊಡ್ಡ ಸಂಶಯ ಮೂಡಿಸುತ್ತಿದೆ. ತಲೆತಲಾಂತರದಿಂದ ಭೂಮಿ ನಂಬಿ ಬದುಕುತ್ತಿರುವ ರೈತರು, ತಮ್ಮದೇ ಜಮೀನಿನಲ್ಲಿ ಪರಾಧೀನರಂತೆ ಬದುಕುವಂತಾಗಿದೆ. ವತನ ರದ್ದತಿ, ಇನಾಮ್​, ಜೋಡಿ ಕೂಡುವ ಕರಾರು, 15 ವರ್ಷ ಪರಾಧೀನ ಮಾಡಬಾರದು ಎಂಬುದು ಸೇರಿದಂತೆ ಹತ್ತು ಹಲವು ತಾಂತ್ರಿಕ ಷರತ್ತುಗಳು ಇಂದಿಗೂ ಪಹಣಿಯಲ್ಲಿ ಉಳಿದುಕೊಂಡಿವೆ. ಹೀಗಾಗಿ, ಬ್ಯಾಂಕ್​ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಇನ್ನೊಂದೆಡೆ ಬೆಳೆ ವಿಮೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದಾರೆ.
ಕೆಲವು ಗ್ರಾಮಗಳ ಮೂಲ ದಾಖಲೆಗಳು ಸರಿಯಿದ್ದರೂ, ಅಧಿಕಾರಿಗಳ ನಿರ್ಲ್ಯದಿಂದ ತಿದ್ದುಪಡಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಆರೋಪವಿದೆ. ದಾಖಲೆಗಳಿದ್ದರೂ ತಿದ್ದುಪಡಿ ಮಾಡಲು ಮೀನಮೇಷ ಎಣಿಸುತ್ತಿರುವ ಧೋರಣೆ ಬಡ ಕುಟುಂಬಗಳಿಗೆ ನಿಧಾನವಾಗಿ ವಿಷ ನೀಡುತ್ತಿರುವಂತಿದೆ. ಪಹಣಿ ಸರಿಯಾಗದ್ದರಿಂದ 2023ರಲ್ಲಿ ರೈತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಆಡಳಿತಾತ್ಮಕ ನಿರ್ಲ್ಯದ ತೀವ್ರತೆಗೆ ಸಾಯಾಗಿದೆ.
ವಿಶೇಷ ಪುನರ್​ ದಾಖಲೆ ಅಭಿಯಾನ: ಗ್ರಾಮ ಮಟ್ಟದಲ್ಲಿ ವಿಶೇಷ ಶಿಬಿರ ನಡೆಸಿ ಹಳೆಯ ದಾಖಲೆಗಳ ಮರುನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯಿತಿ ಮತ್ತು ಹಿರಿಯರ ಸ್ಯಾದ ಆಧಾರದ ಮೇಲೆ ತಾತ್ಕಾಲಿಕ ಭೂಸ್ವಾಮ್ಯ ದೃಢೀಕರಣ ನೀಡಬೇಕು. ಎಲ್ಲ್ಲ ಭೂ ದಾಖಲೆಗಳನ್ನು ಭದ್ರತಾ ಬ್ಯಾಕಪ್​ನೊಂದಿಗೆ ಡಿಜಿಟಲ್​ ರೂಪಕ್ಕೆ ತರಬೇಕು. ಸಮಸ್ಯೆಯಲ್ಲಿರುವ ರೈತರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾಲ ಮತ್ತು ವಿಮೆ ಸೌಲಭ್ಯ ಒದಗಿಸಬೇಕು. ಸಮಸ್ಯೆಗಳ ಪರಿಶೀಲನೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಬೇಕಿದೆ.
"

ಪಹಣಿ ಕಾಲಂಗಳಲ್ಲಿರುವ ಅನಗತ್ಯ ಹಳೆಯ ಷರತ್ತುಗಳನ್ನು ತಣ ರದ್ದುಪಡಿಸಬೇಕು. ಸರ್ಕಾರ ಎಂದು ದಾಖಲಾದ ಜಮೀನುಗಳನ್ನು ಮರುಪರಿಶೀಲಿಸಿ ನೈಜ ರೈತರಿಗೆ ಹಕ್ಕು ನೀಡಬೇಕು. ಕಚೇರಿ ಅಲೆದಾಟ ತಪ್ಪಿಸಿ ಗ್ರಾಮ ಮಟ್ಟದಲ್ಲೇ ಪರಿಹಾರ ಸಿಗಬೇಕು. 

ನಿಂಗಪ್ಪ ಡವಗಿ, ರೈತ, ಹೊಸಳ್ಳಿ ಗ್ರಾಮ.

"

ಪ್ರತಿಭಟನೆ ವೇಳೆ ದಾಖಲೆಗಳು ಸುಟ್ಟಿರುವ ಹಿನ್ನೆಲೆಯಲ್ಲಿ ಸ್ಥಳಿಯ ವಿಚಾರಣೆ ಹಾಗೂ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.

ರವಿಕುಮಾರ ಕೊರವರ, ತಹಸೀಲ್ದಾರ್​, ಸವಣೂರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net