ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವುದು ಮುಖ್ಯ; ಮಂಜುನಾಥ

ಪದಗ್ರಹಣ ಸಮಾರಂಭ
ಪದಗ್ರಹಣ ಸಮಾರಂಭ
Published on

ರಾಣೆಬೆನ್ನೂರು: ವಿದ್ಯಾಥಿರ್ಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸ್ನೇಹ ಹಾಗೂ ಸಮಾಜ ಸೇವೆಯ ಮನೋಭಾವ ಬೆಳೆಸುವಲ್ಲಿ ಇಂರ್ಟಯಾಕ್ಟ ಕ್ಲಬ್ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬ್ಯಾಡಗಿ ರೋಟರಿ ಕ್ಲಬ್ನ ಮಾಜಿ ಅಸಿಸ್ಟೆಂಟ್ ಗವರ್ನರ್ ಹಾಗೂ ಇಂಟರ್ಯಾಕ್ಟ ಕ್ಲಬ್ ಸ್ಥಾಪನಾಧಿಕಾರಿ ಮಂಜುನಾಥ ಉಪ್ಪಾರ ಹೇಳಿದರು.

ನಗರದ ಖನ್ನೂರ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜ್ನಲ್ಲಿ ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಿದ್ದ ನೂತನ ಇಂಟರ್ಯಾಕ್ಟ ಕ್ಲಬ್ನ ಸಂಸ್ಥಾಪನೆ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂಟರ್ಯಾಕ್ಟ ಕ್ಲಬ್ ಸ್ಥಾಪನೆಯು ರೋಟರಿ ಕ್ಲಬ್ನ ಕಮ್ಯುನಿಟಿ ಸವಿರ್ಸ್ ಮತ್ತು ಯೂತ್ ಸವಿರ್ಸ್ ಕಾರ್ಯಕ್ರಮದ ಭಾಗವಾಗಿದೆ. ನೂತನ ಕ್ಲಬ್ನ ಸದಸ್ಯರು ರೋಟರಿಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ರೋಟರಿ ಸದಸ್ಯರ ಮಾರ್ಗದರ್ಶನದಲ್ಲಿ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ವಿದ್ಯಾಥಿರ್ಗಳಲ್ಲಿ ವೈಯಕ್ತಿಕ ನಾಯಕತ್ವದ ಗುಣಗಳು ಬೆಳೆಯುವುದರೊಂದಿಗೆ ಶಿಸ್ತು, ಸ್ನೇಹ ಹಾಗೂ ಸೇವಾ ಮನೋಭಾವನೆ ರೂಪುಗೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ತಾಲೂಕು ಅಧ್ಯಕ್ಷ ಡಾ. ಪ್ರವಿಣ ಖನ್ನೂರ ಮಾತನಾಡಿ, ರೋಟರಿ ಸಂಸ್ಥೆ ಈಗಾಗಲೇ ಹಲವು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಹಲವು ಜನಪರ ಹಾಗೂ ಸಮಾಜ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.

ನೂತನ ಅಧ್ಯಕ್ಷೆ ಅದಿತಿ ಚಿನ್ನಿಕಟ್ಟಿ, ಕಾರ್ಯದಶಿರ್ ಕುಶಾಲಸುರೆ, ಪ್ರಮುಖರಾದ ಬಸವರಾಜ ಸುಂಕಾಪುರ, ಜಿ.ಎಸ್. ರಾಮಚಂದ್ರ, ಜಯಶ್ರೀ ಗುಜ್ಜರ್, ಅನಿಲಕುಮಾರ ಬೊಡ್ಡಪಾಟಿ, ಕಿರಣ ವೆರ್ಣೇಕರ, ಶಿವಯೋಗಿ ಅಂಗಡಿ, ಬಸವರಾಜ ಕೆಲಗಾರ, ವೀರೇಶ ಮೋಟಗಿ, ಜಯಣ್ಣ ಜಂಬಿಗಿ, ಜಿ.ಜಿ. ಹೊಟ್ಟಿಗೌಡ್ರ, ವೀರೇಶ ಹನಗೋಡಿಮಠ, ಡಾ. ಅನಂತರೆಡ್ಡಿ, ಡಾ. ನಾರಾಯಣ ಪವಾರ, ಗಣೇಶ ಜಾಡಮಲಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net