ರಸ್ತೆ ಬದಿ ಚಹಾ ಕುಡಿಯುತ್ತಿದ್ದ ವ್ಯಕ್ತಿ ಬುಲೇರೋ ಡಿಕ್ಕಿಯಾಗಿ ಸಾವು

Crime
Crime
Published on

ರಟ್ಟಿಹಳ್ಳಿ: ರಸ್ತೆ ಬದಿ ಚಹಾ ಕುಡಿಯುತ್ತ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬುಲೇರೋ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ತಾಲೂಕಿನ ರಟ್ಟಿಹಳ್ಳಿ-ತುಮ್ಮಿನಕಟ್ಟಿ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಹಿರೇಮಾದಾಪುರ ಗ್ರಾಮದ ತಿಪ್ಪಯ್ಯ ಸಿದ್ದಯ್ಯ ಮಾಳಗಿಮಠ (57) ಮೃತ ವ್ಯಕ್ತಿ. ಪಟ್ಟಣದ ಅಪ್ರೀದ್ ಆಫೀಜ್ವುಲ್ಲಾ ಉಜನಿ ಡಿಕ್ಕಿ ಪಡಿಸಿದ ಆರೋಪಿ.

ತಿಪ್ಪಯ್ಯ ರಸ್ತೆ ಬದಿ ಚಹಾ ಕುಡಿಯುತ್ತ ನಿಂತಿದ್ದ ಸಮಯದಲ್ಲಿ ಅಪ್ರೀದ್ ತಾನು ಚಲಾಯಿಸುತ್ತಿದ್ದ ಬುಲೇರೋ ವಾಹನವನ್ನು ಡಿಕ್ಕಿ ಪಡಿಸಿದ್ದಾನೆ. ಇದರಿಂದ ತಿಪ್ಪಯ್ಯ ಮೃತಪಟ್ಟಿದ್ದಾನೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net