

ರಾಣೆಬೆನ್ನೂರ: ನಗರದ ಹಳೇ ಪಿ.ಬಿ. ರಸ್ತೆಯ ವಿಭಜಕಕ್ಕೆ ಬಣ್ಣ ಹಚ್ಚುತ್ತಿದ್ದ ವ್ಯಕ್ತಿಗೆ ಟಾಟಾಎಎಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೆ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಡೆದಿದೆ.
ಹಾವೇರಿ ತಾಲೂಕಿನ ಭೂಕೊಡಿಹಳ್ಳಿ ನಿವಾಸಿ ಜಗದೀಶ ವೆಂಕಪ್ಪ ವಡ್ಡರ (45) ಮೃತ ವ್ಯಕ್ತಿ. ಇಲ್ಲಿಯ ನೇಕಾರ ಕಾಲನಿ ನಿವಾಸಿ ನಾರಾಯಣ ಬಾಲಚಂದ್ರಪ್ಪ ಚೂಡಗುಂಡಿ (32) ಡಿಕ್ಕಿ ಹೊಡೆಸಿದ ವಾಹನ ಚಾಲಕ.
ಜಗದೀಶ ರಸ್ತೆ ವಿಭಜಕಕ್ಕೆ ಬಣ್ಣ ಹಚ್ಚಿ ಸಾಮಗ್ರಿಗಳನ್ನು ಬುಲೇರೊ ವಾಹನಕ್ಕೆ ಹಾಕಿಕೊಳ್ಳುತ್ತಿದ್ದ ಸಮಯದಲ್ಲಿ ನಾರಾಯಣ ತಾನು ಚಲಾಯಿಸುತ್ತಿದ್ದ ಟಾಟಾಎಎಸ್ ವಾಹನ ಡಿಕ್ಕಿ ಪಡಿಸಿದ್ದಾನೆ. ಇದರಿಂದ ಜಗದೀಶ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.