ಲೋಕಾ ಬಲೆಗೆ ಕಂದಾಯ ನಿರೀಕ್ಷಕ

ರಾಮನಗೌಡ ಚನ್ನಬಸನಗೌಡ ದ್ಯಾಮನಗೌಡ್ರ
ರಾಮನಗೌಡ ಚನ್ನಬಸನಗೌಡ ದ್ಯಾಮನಗೌಡ್ರ
Published on
ಉತಾರ ತಿದ್ದುಪಡಿಗೆ 12,000 ರೂ.ಗೆ ಬೇಡಿಕೆ ಇಟ್ಟಿದ್ದ ಅಧಿಕಾರಿ
ಬ್ಯಾಡಗಿ: ವ್ಯಕ್ತಿಯೊಬ್ಬರ ಉತಾರ ದುರಸ್ತಿ ಮಾಡಿಕೊಡಲು 12,000 ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 5,000 ರೂ. ಲಂಚ ಪಡೆಯುವ ವೇಳೆ ಬ್ಯಾಡಗಿ ತಾಲೂಕು ಕಂದಾಯ ನಿರೀಕ್ಷಕ ರಾಮನಗೌಡ ಚನ್ನಬಸನಗೌಡ ದ್ಯಾಮನಗೌಡ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 
ಬ್ಯಾಡಗಿ ತಾಲೂಕು ಕಾಶಂಬಿ ಗ್ರಾಮದ ನಾಗರಾಜ ಹನುಮಂತಪ್ಪ ಓಲೇಕಾರ ಎಂಬುವವರು ಸರ್ವೇ ನಂಬರ್​ 13/2ರ ಕಾಲಂ 11ರಲ್ಲಿ ಹೊಸ ಷರತ್ತು ಕಡಿಮೆ ಮಾಡಿಸಿ, ಉತಾರ ತಿದ್ದುಪಡಿ ಮಾಡಿಸಲು ಅಜಿರ್ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು 12,000 ರೂ. ಲಂಚಕ್ಕೆ ಬೇಡಿಕೆ ಇಟ್ಟು,  ಮುಂಗಡವಾಗಿ ಗುರುವಾರ ಕುಮ್ಮೂರ ಕ್ರಾಸ್​ ಬಳಿ 5,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರಾಪ್​ ಮಾಡಿದ್ದಾರೆ. 
ಲೋಕಾಯುಕ್ತ ಪೊಲೀಸ್​ ದಾವಣಗೆರೆ ಎಸ್​ಪಿ ಎಂ.ಎಸ್​. ಕೌಲಾಪುರೆ, ಹಾವೇರಿ ಡಿವೈಎಸ್​ಪಿ ಮಧುಸೂದನ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವಿಶ್ವನಾಥ ಕಬ್ಬೂರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬ್ಯಾಡಗಿ ತಹಸೀಲ್ದಾರ್​ ಕಚೇರಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net