development discussion ಸಾರ್ವಜನಿಕರ ಎದುರಿಗೆ ಅಭಿವೃದ್ಧಿ ಚರ್ಚೆಗೆ ಸಿದ್ಧ

ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್​ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. development discussion
ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್​ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. development discussion
Published on
ಶಿಗ್ಗಾಂವಿ: ಕ್ಷೇತ್ರದಲ್ಲಿ ಬಿಜೆಪಿ ಆಡಳಿತದ 17 ವರ್ಷ ಮತ್ತು 14 ತಿಂಗಳಲ್ಲಿನ ಕಾಂಗ್ರೆಸ್​ ಸರ್ಕಾರ ಕೈಗೊಂಡ ಅಭಿವೃದ್ಧಿ ಕೆಲಸದ (development discussion ) ಬಗ್ಗೆ ಸಾರ್ವಜನಿಕರ ಎದುರು ಚಚಿರ್ಸಲು ಸಿದ್ಧರಿದ್ದೇವೆ. ಇಬ್ಬರು ಒಟ್ಟಿಗೆ ಹಳ್ಳಿಗಳಿಗೆ ಹೋಗೋಣ ಸಮಯ ನಿಗದಿಪಡಿಸಿ ಎಂದು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಗುಡ್ಡಪ್ಪ ಜಲದಿ ಸವಾಲು ಹಾಕಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ, ಸವಣೂರ, ಬಂಕಾಪುರ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಅಂದಾಜು 351 ಕೋಟಿ ರೂ. ವೆಚ್ಚದ ಯೋಜನೆ 3 ತಿಂಗಳ ಹಿಂದೆ ೂಷಣೆಯಾಗಿದೆ. ಈಗಾಗಲೇ ಡಿಪಿಆರ್​ ಸಿದ್ಧವಾಗಿ ಟೆಂಡರ್​ ಪ್ರಕ್ರಿಯೆಯಲ್ಲಿದೆ. ಇದನ್ನು ಬಿಜೆಪಿಗರು ಅರಿತುಕೊಳ್ಳಬೇಕು. ಸಂತ ಪ್ರತಿಷ್ಠಾನ ಮೊನ್ನೆಯಷ್ಟೇ ೂಷಣೆಯಾಗಿದೆ. ಆದರೂ, ಕಾರ್ಯಾರಂಭ ಯಾವಾಗ ಎಂದು ಕೇಳುತ್ತಿದ್ದಾರೆ. ಶಿಗ್ಗಾಂವಿ ೇತ್ರದಲ್ಲಿ 17 ವರ್ಷಗಳ ಕಾಲ ಬಿಜೆಪಿ ಆಡಳಿತವಿತ್ತು. 14 ತಿಂಗಳ ಕಾಂಗ್ರೆಸ್​ ಶಾಸಕರ ಅವಧಿಯಲ್ಲಿನ ಸಾಧನೆಗಳ ಕುರಿತು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಶಾಸಕ ಯಾಸೀರಖಾನ್​ ಪಠಾಣ ಅವರು ಕ್ಷೇತ್ರಕ್ಕೆ ಕೆಪಿಎಸ್​ಸಿ ಶಾಲೆಗಳನ್ನು ಮಂಜೂರು ಮಾಡಿಸಿದ್ದಾರೆ. ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಸಾವಿರ ಅಜಿರ್ ಬಂದಿವೆ. 400 ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಇದನ್ನು ನಿಮಗೆ ನೆನಪಿಸುತ್ತಿದ್ದೇವೆ ಎಂದರು.
2008ರ ಪೂರ್ವದಲ್ಲಿ ಶಿಗಾಂವಿ, ಸವಣೂರ ಹಿಂದುಳಿದ ತಾಲೂಕಾಗಿದ್ದವು ಬಸವರಾಜ ಬೊಮ್ಮಾಯಿ ಶಾಸಕರಾದ ನಂತರ ಅಭಿವೃದ್ಧಿಯಾಗಿದೆಯಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. 2008ರ ಪೂರ್ವದಲ್ಲಿ ಕಾಂಗ್ರೆಸ್​ ಶಾಸಕರಾಗಿದ್ದ ಮಂಜುನಾಥ ಕುನ್ನೂರ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೆಎಸ್​ಆರ್​ಪಿ 10ನೇ ಬೆಟಾಲಿಯನ್​, ಶಿಗ್ಗಾಂವಿ, ಸವಣೂರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ವರದಾ ನದಿಯಿಂದ ಪೈಪ್​ಲೈನ್​ ಮೂಲಕ ಶಿಗ್ಗಾಂವಿಯ ನಾಗನೂರ ಕೆರೆಗೆ ಹಾಗೂ ಸವಣೂರಿನ ಮೋತಿ ತಲಾಬ್​ ಕೆರೆಗೆ ನೀರು ಹರಿಸಲಾಗಿದೆ. ಅನೇಕ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳು, ಪ್ರವಾಸಿ ಮಂದಿರ, ಹೊಸ ಬಸ್​ ನಿಲ್ದಾಣ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದಾಗಲೆ ಹಿಂದುಳಿದ ತಾಲೂಕಿನ ಹಣೆಪಟ್ಟಿ ಕಳಚಿಹೋಗಿದೆ. ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಅಭಿವೃದ್ಧಿ ಆಗಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದರು.
ಸವಣೂರ ಬ್ಲಾಕ್​ ಕಾಂಗ್ರೆಸ್​ ಅಧ್ಯ ರಮೇಶ ಹರಿಜನ, ಗ್ಯಾರಂಟಿ ಸಮಿತಿ ಅಧ್ಯ ಎಸ್​.ಎ್​. ಮಣಕಟ್ಟಿ, ಕೆಎಂಎ್​ ನಿರ್ದೇಶಕ ಶಂಕರಗೌಡ ಪಾಟೀಲ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net