ರಟ್ಟಿಹಳ್ಳಿ ತಾಲೂಕಿನಲ್ಲಿ ಜಾನುವಾರು ಕಳ್ಳತನ ಆರೋಪಿ ಬಂಧನ arrest

ಜಾನುವಾರು ಕಳ್ಳತನ ಮಾಡಿದ್ದ ಆರೋಪಿಯನ್ನು ರಟ್ಟಿಹಳ್ಳಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿರುವುದು. ಪಿಎಸ್​ಐ ರಮೇಶ ಪಿ.ಎಸ್​., ಚಂದ್ರಶೇಖರ ವಿಭೂತಿ, ಸಿಬ್ಬಂದಿ ಇದ್ದರು.
ಜಾನುವಾರು ಕಳ್ಳತನ ಮಾಡಿದ್ದ ಆರೋಪಿಯನ್ನು ರಟ್ಟಿಹಳ್ಳಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿರುವುದು. ಪಿಎಸ್​ಐ ರಮೇಶ ಪಿ.ಎಸ್​., ಚಂದ್ರಶೇಖರ ವಿಭೂತಿ, ಸಿಬ್ಬಂದಿ ಇದ್ದರು.
Published on
ರಟ್ಟಿಹಳ್ಳಿ: ತಾಲೂಕಿನ ಮಕರಿ ಮತ್ತು ಶಿರಗಂಬಿ ಗ್ರಾಮದಲ್ಲಿ ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಜಾನುವಾರುಗಳ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಲತಃ ಶಿಕಾರಿಪುರ ತಾಲೂಕಿನ ಕವಾಸಪುರದ, ಸದ್ಯ ಮಾಸೂರಿನ ನಿವಾಸಿ ವಾಜೀದ ಹುಸೇನ್​ಸಾಬ್​ ಗದಗ ಬಂಧಿತ.
ಕಳೆದ ಎರಡು ತಿಂಗಳಲ್ಲಿ ಶಿರಗಂಬಿ ಮತ್ತು ಮಕರಿ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನವಾಗಿದ್ದ ಬಗ್ಗೆ ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್​ಪಿ ಯಶೋಧಾ ವಂಟಗೋಡಿ, ಎಎಸ್​ಪಿ ಎಲ್​.ವೈ. ಶಿರಕೋಳ, ಡಿಎಸ್​ಪಿ ಲೋಕೇಶ ಜೆ., ಮತ್ತು ಸಿಪಿಐ ಮಂಜುನಾಥ ಪಂಡಿತ್​ ಅವರ ಮಾರ್ಗದರ್ಶನದಲ್ಲಿ ಸ್ಥಳಿಯ ಪಿಎಸ್​ಐ ರಮೇಶ ಪಿ.ಎಸ್​. ಚಂದ್ರಶೇಖರ ವಿಭೂತಿ ನೇತೃತ್ವದ ತಂಡ ರಚಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ವಾಜೀದ ಗದಗ ಎಂಬಾತನನ್ನು ಬಂಧಿಸಿ, ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಒಂದು ಬೊಲೇರೋ ವಾಹನ ಮತ್ತು ಒಂದು ಮೊಬೈಲ್​ ೋನ್​ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಇಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವ ಬಗ್ಗೆ ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಸಿಬ್ಬಂದಿ ಮಾಲತೇಶ ನ್ಯಾಮತಿ, ರವಿ ಅಳಲಗೇರಿ, ಬಸವರಾಜ ಸಣ್ಣಪ್ಪನವರ, ರವಿ ಲಮಾಣಿ, ರಿಯಾಜ್​ ದೊಡ್ಡಮನಿ, ಹರೀಶ ಹಲಗೇರಿ, ದೇವೆಂದ್ರಪ್ಪ ದೊಡ್ಡಮನಿ, ಎಂ.ಜಿ. ಮಲ್ಲನಗೌಡ್ರು, ಕುಮಾರ ಬಳ್ಳಾರಿ, ಗಣೇಶ ಹಳ್ಳಳ್ಳಿ, ಬಸವರಾಜ ಕೊರವರ, ಬಸವರಾಜ ಬಾಗೋಡಿ, ಮಲ್ಲಿಕಾರ್ಜುನ ನಾಗವಂದ, ರಮೇಶ ಬಡಿಗೇರ, ಮಾರುತಿ ಹಾಲಭಾವಿ, ಸತೀಶ ಮರಕಟ್ಟಿ ಇತರರನ್ನು ಪೊಲೀಸ್​ ಇಲಾಖೆ ಶ್ಲಾಘಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net