ರಟ್ಟಿಹಳ್ಳಿಯಲ್ಲಿ ಬಾಳೆ ತೋಟ ಬೆಂಕಿಗಾಹುತಿ banana fire

ರಟ್ಟಿಹಳ್ಳಿ ಪಟ್ಟಣದ ಚಿಕ್ಕಯಡಚಿ ರಸ್ತೆಯಲ್ಲಿ ಮೃತ್ಯುಂಜಯ ಬೆಣ್ಣಿ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ಆಕಸ್ಮಿಕ ಬೆಂಕಿಗೆ ಹಾನಿಯಾಗಿದೆ.
ರಟ್ಟಿಹಳ್ಳಿ ಪಟ್ಟಣದ ಚಿಕ್ಕಯಡಚಿ ರಸ್ತೆಯಲ್ಲಿ ಮೃತ್ಯುಂಜಯ ಬೆಣ್ಣಿ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ಆಕಸ್ಮಿಕ ಬೆಂಕಿಗೆ ಹಾನಿಯಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • 1,740 ಬಾಳೆ ಗಿಡಗಳು, 40 ಮಹಾಗನಿ, 40 ಪಪ್ಪಾಯಿ, 12 ತೆಂಗಿನ ಗಿಡಗಳು ಸುಟ್ಟು ಭಸ್ಮ
ರಟ್ಟಿಹಳ್ಳಿ: ಪಟ್ಟಣದ ಚಿಕ್ಕಯಡಚಿ ರಸ್ತೆಯಲ್ಲಿರುವ ಮೃತ್ಯುಂಜಯ ಬೆಣ್ಣಿ ಅವರ ಕುಟುಂಬಕ್ಕೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ವಿವಿಧ ಬಗೆಯ 1,830ಕ್ಕೂ ಅಧಿಕ ಗಿಡಗಳು ಭಾನುವಾರ ಆಕಸ್ಮಿಕ ಬೆಂಕಿಗಾಹುತಿಯಾಗಿವೆ. 
1,740 ಬಾಳೆ ಗಿಡಗಳು, 40 ಮಹಾಗನಿ, 40 ಪಪ್ಪಾಯಿ, 12 ತೆಂಗಿನ ಗಿಡಗಳು ಸುಟ್ಟು ಕರಕಲಾಗಿವೆ. ನೀರಾವರಿ ವ್ಯವಸ್ಥೆಗೆ ಅಳವಡಿಸಿದ್ದ  ಪೈಪ್‌ಗಳು ಸಂಪೂರ್ಣ ಸುಟ್ಟಿವೆ ಎಂದು ಜಮೀನು ಮಾಲೀಕ ಮೃತ್ಯುಂಜಯ ಅವರು ನೋವು ತೋಡಿಕೊಂಡರು. ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
1,740 ಬಾಳೆಗಿಡಗಳಿಗೆ ಹಾನಿ:
ಮೃತ್ಯುಂಜಯ ಬೆಣ್ಣಿ ಕುಟುಂಬಸ್ಥರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬಾಳೆ ಗಿಡಗಳು ಇನ್ನೆರಡು ತಿಂಗಳಲ್ಲಿ ಉತ್ತಮ ಸಲು ನೀಡುವ ಹಂತದಲ್ಲಿದ್ದವು. ಬಾಳೆ ಬೆಳೆಯಲ್ಲಿ ಒಣಗಿದ ಎಲೆಗಳನ್ನು ನೈಸರ್ಗಿಕ ಗೊಬ್ಬರವಾಗಲು ಕೆಳಗೆ ಬಿಡಲಾಗಿತ್ತು. ಆಕಸ್ಮಿಕ ಬೆಂಕಿ ಒಣ ಎಲೆಗಳೊಂದಿಗೆ ಬಾಳೆ ಗಿಡಗಳಿಗೆ ಹೊತ್ತಿಕೊಂಡು ಸುಟ್ಟಿವೆ. 
ವಿಷ ಸೇವಿಸಿ ಯುವಕ ಸೂಯಿಸೈಡ್
ಹಿರೇಕೆರೂರ: ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ವಾಡಿಕೊಂಡ ಟನೆ ತಾಲೂಕಿನ ಎಂ.ಎಂ. ಯತ್ತಿನಹಳ್ಳಿಯಲ್ಲಿ ನಡೆದಿದೆ.
ಧನರಾಜ ರಾಜಾನಾಯ್ಕ ಲವಾಣಿ (24)  ಆತ್ಮಹತ್ಯೆ ವಾಡಿಕೊಂಡ ಯುವಕ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿ ನಮ್ಮ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ. ಆದ್ದರಿಂದ ನಮ್ಮ ಮದುವೆ ಸಾಧ್ಯವಿಲ್ಲ ಎಂದು ಹೇಳಿದ್ದಳು. ಇದರಿಂದ ಮನನೊಂದು ಧನರಾಜ ಮನೆಯಲ್ಲಿದ್ದ ಶುಂಠಿ ಬೆಳೆಗೆ ಸಿಂಪಡಿಸುವ ಔಷಧ ಕುಡಿದು ಮೃತಪಟ್ಟಿದ್ದಾನೆ. ಹಿರೇಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಬ್ಯಾಡಗಿ: ಸಾಲಬಾಧೆಯಿಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ವಾಡಿಕೊಂಡ ಟನೆ ಪಟ್ಟಣದ ದ್ಯಾಮವ್ವನ ಗುಡಿ ಓಣಿಯಲ್ಲಿ ನಡೆದಿದೆ. ಸತೀಶ ರೇವಣೆಪ್ಪ ಮೋಟೆಬೆನ್ನೂರ (46) ಆತ್ಮಹತ್ಯೆ ವಾಡಿಕೊಂಡ ರೈತ. ಇವರು ಕೃಷಿಗಾಗಿ ಬ್ಯಾಂಕ್ ಹಾಗೂ ಸಹಕಾರಿ ಸಂದಲ್ಲಿ 2 ಲಕ್ಷ ರೂ. ಸಾಲ ವಾಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಳೆಯಿಂದ ಹಾಳಾಗಿದ್ದರಿಂದ ಸಾಲ ತೀರಿಸಲಾಗದೆ ಮನನೊಂದು ಜಮೀನಿನಲ್ಲಿನ ದನದ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ವಾಡಿಕೊಂಡಿದ್ದಾರೆ. ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net