ಭಾರಿ ಗಾಳಿ ಸಮೇತ ಸುರಿದ ಮಳೆ; ಬಿದ್ದ ವಿದ್ಯುತ್ ಕಂಬ, ಆಟೋರಿಕ್ಷಾ ಜಖಂ

ಅಟೋರಿಕ್ಷಾ ಜಖಂ
ಅಟೋರಿಕ್ಷಾ ಜಖಂ
Published on

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಲ್ಲಿ ಸೋಮವಾರ ಸಂಜೆ ಭಾರಿ ಗಾಳಿ ಸಮೇತ ಮಳೆ ಸುರಿದಿದ್ದು, ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದು ಜನಜೀವನ ಅಸ್ಥವ್ಯಸ್ತಗೊಂಡಿದೆ. ಗೌರಿಶಂಕರ ನಗರದಲ್ಲಿ ಆಟೋರಿಾ ಮೇಲೆ ಮರ ಉರುಳಿ ಬಿದ್ದು ಆಟೋ ಜಖಂಗೊಂಡಿದೆ.

ಸಂಜೆ ಸಮಯಕ್ಕೆ ಭಾರಿ ಗಾಳಿ ಸಮೇತ ಮಳೆ ಸುರಿದಿದ್ದರಿಂದ ಉಮಾಶಂಕರ ನಗರ, ಗೌರಿಶಂಕರ ನಗರ ಸೇರಿ ವಿವಿಧೆಡೆ 10ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ಕೆಲವೆಡೆ ಮನೆಯ ಮುಂಭಾಗ ಮರಗಳು ಉರುಳಿ ಬಿದ್ದಿದ್ದರಿಂದ ಭಾರಿ ಸಮಸ್ಯೆ ಎದುರಿಸುವಂತಾಗಿದೆ.

ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ನಗರಾಧ್ಯಂತ 2 ಗಂಟೆಗೂ ಅಧಿಕ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದೆ. ನಂತರ ವಿದ್ಯುತ್ ಕಂಬಗಳು ಬಿದ್ದ ಪ್ರದೇಶ ಬಿಟ್ಟು ಉಳಿದೆಡೆ ವಿದ್ಯುತ್ ಸರಬರಾಜು ಆರಂಭಿಸಲಾಗಿದೆ. ಮರ ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಕಣ್ಣೀರು ಹಾಕಿದ ಆಟೋ ಚಾಲಕ...

ನಗರದ ಗಡಾದ ಆಸ್ಪತ್ರೆ ಬಳಿ ಮರದ ಕೆಳಗೆ ನಿಲ್ಲಿಸಿದ ಆಟೋರಿಾ ಮೇಲೆ ಬೃಹತ್ ಮರ ಮುರಿದು ಬಿದ್ದು ಆಟೋ ಸಂರ್ಪೂಣ ಜಖಂಗೊಂಡಿದೆ. ಜಬೀವುಲ್ಲಾ ದಾವಣಗೆರೆ ಎಂಬುವರಿಗೆ ಸೇರಿದ ಆಟೋ ಜಖಂ ಆಗಿದ್ದು, ಮಳೆ ಬಂದ ಸಮಯದಲ್ಲಿ ಆಟೋರಿಾವನ್ನು ಮರದ ಕೆಳಗೆ ನಿಲ್ಲಿಸಿದ್ದರು. ಈ ಸಮಯದಲ್ಲಿ ಬಾರಿ ಗಾಳಿಮಳೆಗೆ ಮರ ಬಿದ್ದಿದೆ. ಇದರಿಂದ ಆಟೋ ಕಳೆದುಕೊಂಡ ಮಾಲೀಕ ಸ್ಥಳದಲ್ಲಿ ಕಣ್ಣೀರು ಹಾಕಿದರು.

ಮತ್ತೊಂದೆಡೆ ನಗರದ ಗಟಾರುಗಳು ತುಂಬಿ ಹರಿದು ಕೊಳಚೆ ನೀರು ರಸ್ತೆಗಳ ಮೇಲೆಯೆ ಹರಿದಿದೆ. ಹೀಗಾಗಿ ಬೈಕ್ ಸವಾರರು, ಪಾದಚಾರಿಗಳು ಓಡಾಡಲು ತೀವ್ರ ತೊಂದರೆ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net