ಮಳೆಗಾಗಿ ಪ್ರಾಥಿರ್ಸಿ ಕತ್ತೆಗಳ ಮದುವೆ; ಗ್ರಾಮದಲ್ಲಿ ಮೆರವಣಿಗೆ

ಕತ್ತೆಗಳ ಮದುವೆ
ಕತ್ತೆಗಳ ಮದುವೆ
Published on

ರಾಣೆಬೆನ್ನೂರು: ಮಳೆ ಕೊರತೆಯಿಂದ ಆತಂಕಗೊಂಡಿರುವ ರೈತರು ವರುಣನ ಕೃಪೆಗಾಗಿ ವಿವಿಧ ರೀತಿಯ ಧಾಮಿರ್ಕ ಆಚರಣೆಗಳನ್ನು ನಡೆಸುವುದು ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿದೆ. ಅದರಂತೆ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ಉತ್ತಮ ಮಳೆಗಾಗಿ ಪ್ರಾಥಿರ್ಸಿ ಗ್ರಾಮಸ್ಥರು ವಿನೂತನವಾಗಿ ಕತ್ತೆಗಳ ಮದುವೆ ನೆರವೇರಿಸಿ ಮೆರವಣಿಗೆ ನಡೆಸಿದರು.

ಗ್ರಾಮದ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕತ್ತೆಗಳಿಗೆ ವಧು-ವರರಂತೆ ಅಲಂಕಾರ ಮಾಡಲಾಗಿತ್ತು. ಅವುಗಳಿಗೆ ಹೂವಿನ ಹಾರ ಹಾಕಿ, ಹೊಸ ಬಟ್ಟೆಗಳಿಂದ ಸಿಂಗರಿಸಿ ಸಂಪ್ರದಾಯಬದ್ಧವಾಗಿ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಯಿತು. ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಿ ವರುಣ ದೇವರಿಗೆ ಮಳೆ ಸುರಿಸುವಂತೆ ಪ್ರಾಥಿರ್ಸಲಾಯಿತು.

ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಭಜನೆ, ಘೋಷಣೆಗಳೊಂದಿಗೆ ಸಾಗಿದ ಮೆರವಣಿಗೆ ಗ್ರಾಮದಲ್ಲಿ ಗಮನ ಸೆಳೆಯಿತು. ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯಗಳು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಪ್ರಕೃತಿಯ ಅನುಗ್ರಹಕ್ಕಾಗಿ ಈ ಆಚರಣೆ ಕೈಗೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದರು.

ಗ್ರಾಮಸ್ಥರ ಈ ವಿಭಿನ್ನ ಪ್ರಾರ್ಥನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಕಾರಣವಾಗಿದ್ದು, ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಆಶಯ ಎಲ್ಲರಲ್ಲೂ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net