

ರಾಣೆಬೆನ್ನೂರು: ರೈಲ್ವೆ ಹಳಿಗೆ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ದೇವರಗುಡ್ಡ ಸೇತುವೆ ಬಳಿ ಶುಕ್ರವಾರ ನಡೆದಿದೆ.
ಇಲ್ಲಿಯ ಸದಾಶಿವ ನಗರದ ಗುಡ್ಡದೇಶ ಆನಂದಪ್ಪ ಕಮ್ಮಾರ (32) ಮೃತ ವ್ಯಕ್ತಿ.
ಈತ ಹಳಿಯ ಮೇಲೆ ಬಂದು ಮಲಗಿದಾಗ ರೈಲು ಹಿರಿದು ಹೋಗಿದೆ. ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.