ರೈತರಿಂದ 50 ಕ್ವಿಂಟಾಲ್ ಗೋವಿನಜೊಳ ಖರೀದಿ maize purchase

ಬ್ಯಾಡಗಿ ಟಿಎಪಿಸಿಎಂಎಸ್ ಆವರಣದಲ್ಲಿ ಗೋವಿನಜೋಳದ maize purchaseಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.
ಬ್ಯಾಡಗಿ ಟಿಎಪಿಸಿಎಂಎಸ್ ಆವರಣದಲ್ಲಿ ಗೋವಿನಜೋಳದ maize purchaseಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.
Published on
ಬ್ಯಾಡಗಿ: ಜಿಲ್ಲೆಯ ವಿವಿಧೆಡೆ ಬೆಂಬಲ ಬೆಲೆಯಡಿ ಗೋವಿನ ಜೋಳದ ಖರೀದಿ (maize purchase) ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ರೈತರು ತಮ್ಮ ಬೆಳೆಯನ್ನು ಅಲ್ಲಿ ಮಾರಾಟ ಮಾಡುವ ಮೂಲಕ ನಿಗದಿತ ಬೆಲೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಆರಂಭವಾಗಿರುವ ಗೋವಿನಜೋಳದ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾದ್ಯಂತ ಪ್ರಮುಖ ಬೆಳೆಯಾಗಿರುವ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸುವಂತೆ ರೈತ ಸಂಘಟನೆಗಳು ಸೇರಿದಂತೆ ರೈತ ಸಮುದಾಯ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಖರೀದಿ ಕೇಂದ್ರ ಆರಂಭಿಸಲಾಗಿದೆ. ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಆಧಾರದ ಮೇಲೆ ಎಕರೆಗೆ 12 ಕ್ವಿಂಟಾಲ್​ನಂತೆ ಒಟ್ಟು 50 ಕ್ವಿಂಟಾಲ್​ವರೆಗೂ ಮಾರಾಟ ಮಾಡಬಹುದಾಗಿದೆ. ಕ್ವಿಂಟಾಲ್​ಗೆ 2400 ರೂ. ದರ ನಿಗದಿಪಡಿಸಲಾಗಿದೆ. ಆಯ್ದ ಖರೀದಿದಾರರು ನಿಗದಿಪಡಿಸಿದ ಉತ್ಪನ್ನವನ್ನು ರೈತರಿಂದ ಖರೀದಿಸಿ ಹಣ ಪಾವತಿಸಲಿದ್ದಾರೆ. ರೈತರು ಆಧಾರ ಕಾರ್ಡ್ ಮೂಲಕ ಹೆಸರು ನೋಂದಣಿ ಮಾಡಿದಲ್ಲಿ ಖರೀದಿ ಬಳಿಕ ಅವರ ಖಾತೆಗೆ ಹಣ ಜಮೆಯಾಗಲಿದೆ ಎಂದರು.
ನೂಕುನುಗ್ಗಲು ಬೇಡ: ಡಿ. 15ರಿಂದ ಬ್ಯಾಡಗಿಯ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದು, ಈವರೆಗೂ ರೈತರು ಗೋವಿನಜೋಳ ತಂದಿರಲಿಲ್ಲ. ಈಗ ಎರಡು ದಿನಗಳಿಂದ ರೈತರು ಉತ್ಪನ್ನ ತರುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೂಕುನುಗ್ಗಲು ಉಂಟು ಮಾಡದೆ, ನಿಗದಿತ ಸಮಯದಲ್ಲಿ ಗೋವಿನಜೋಳ ಕೇಂದ್ರದಲ್ಲಿ ಮಾರಾಟ ಮಾಡಬೇಕು. ರೈತರ ಚೀಲಗಳು ಬರುತ್ತಿದ್ದಂತೆ ಟೆಂಡರ್ ಪಡೆದ ಖರೀದಿದಾರರು ಅವುಗಳನ್ನು ತಮ್ಮ ವಾಹನಗಳಲ್ಲಿ ತೂಕ ಮಾಡಿದ ಬಳಿಕ ಹೇರಿಕೊಂಡು ತೆರಳುತ್ತಾರೆ. ಬಳಿಕ ರೈತರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಸಹಕಾರಿ ಸಂಘದ ವ್ಯವಸ್ಥಾಪಕರು ತಿಳಿಸಿದ್ದಾರೆ.
ತಹಸೀಲ್ದಾರ್ ಚಂದ್ರಶೇಖರ ನಾಯಕ, ಎಪಿಎಂಸಿ ಕಾರ್ಯದರ್ಶಿ ಡಿ.ಬಿ. ಆದರ್ಶ, ಗ್ರಾಮ ಆಡಳಿತಾಧಿಕಾರಿ ಶ್ರುತಿ ಮೈದೂರು, ಟಿಎಪಿಸಿಎಂಎಸ್ ವ್ಯವಸ್ಥಾಪಕ ಪ್ರಭುಲಿಂಗ ಬಣಕಾರ ಗುಡ್ಡಪ್ಪ ಬಸನಗೌಡ್ರ, ಯು.ಸಿ. ದಾನಮ್ಮನವರ, ವಿನಾಯಕ ಪೂಜಾರ, ಚೇತನ ತೆವರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net