

ರಾಣೆಬೆನ್ನೂರ: ಆಟೋಗಳಿಗೆ ತುಂಬಿಸುವ ಎಲ್ಪಿಜಿ ಗ್ಯಾಸ್ ಬಂಕ್ಗಳ ಮಾಲೀಕರು ಏಕಾಏಕಿ ಬೆಲೆ ಏರಿಕೆ ಮಾಡಿ ಆಟೋರಿಾದವರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಆಟೋರಿಾ ಚಾಲಕರು ಮತ್ತು ಮಾಲೀಕರು ನಗರದ ಗ್ಯಾಸ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಗ್ಯಾಸ್ ಬಂಕ್ನವರು ಸಂಗ್ರಹವಿದ್ದರೂ ಗ್ಯಾಸ್ ಇಲ್ಲವೆಂದು ಹೇಳಿ ಆಟೋದವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದಾದ ಎರಡು ದಿನದಲ್ಲಿ 82 ರೂ.ಗೆ ಕೆ.ಜಿ. ಇರುವ ಗ್ಯಾಸ್ಅನ್ನು 102 ರೂ.ಗೆ ಏರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ.
ನಗರದಲ್ಲಿ 500ಕ್ಕೂ ಅಧಿಕ ಆಟೋರಿಾಗಳು ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಬಂಕ್ನವರ ಕಣ್ಣಾಮುಚ್ಚಾಲೇ ಆಟದಿಂದ ಎಲ್ಲರೂ ಬೇಸತ್ತು ಹೋಗಿದ್ದಾರೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಆದ್ದರಿಂದ ವಿನಾಕಾರಣ ಬೆಲೆಯಲ್ಲಿ ತಾರತಮ್ಯ ಮಾಡುತ್ತಿರುವ ಮತ್ತು ಗ್ಯಾಸ್ನ ಅಭಾವ ಸೃಷ್ಟಿಸುತ್ತಿರುವ ಗ್ಯಾಸ್ ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಆಹಾರ ನಿರೀಕ್ಷಕ ಸ್ಟಿವನ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ನಾಗರಾಜ ಹಾರೋಗೊಪ್ಪ, ಅಜಯ ಹುಲ್ಲತ್ತಿ, ರಮೇಶ ಪೂಜಾರ, ಕೃಷ್ಣ ಸಾಳೇರ, ಮಾಲತೇಶ ಕರೂರ, ನಟರಾಜ ಗುಡ್ಡದ, ಪರಶುರಾಮ ಎಳಮಲಿ, ನಾಗರಾಜ ಲಮಾಣಿ, ಎಂ.ಐ. ಬೇವಿನಮರದ ಮತ್ತಿತರರು ಇದ್ದರು.