ಮನವಿ ಸ್ವೀಕರಿಸಿದ ನಗರ ಆಶ್ರಯ ಸಮಿತಿ ಅಧ್ಯ ಮುನಾಲಿ ಎರೆಸೀಮೆ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆ ಪುರಸಭೆ ಆಡಳಿತಾಧಿಕಾರಿಗಳು, ಶಾಸಕರು ಹಾಗೂ ಮುಖ್ಯಾಧಿಕಾರಿ, ಆಶ್ರಯ ಸಮಿತಿ ಸದಸ್ಯರು ಜಂಟಿಯಾಗಿ ಸಭೆ ನಡೆಸಿ, ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಲಾನುಭವಿಗಳ ಆಯ್ಕೆಪಟ್ಟಿಗೆ ಅಂತಿಮ ಅಂಕಿತ ಹಾಕಲಾಗಿದೆ. ಶ್ರೀದಲ್ಲಿ 351 ಜನರಿಗೆ ನೋಂದಣಿ ರ್ಪೂಣಗೊಳಿಸಿ ಹಕ್ಕುಪತ್ರ ವಿತರಣೆ ನಡೆಯಲಿದೆ. ಉಳಿದವರಿಗೂ ಹಾಗೂ ಉಳಿದ ನಿವೇಶನಗಳ ಲಾನುಭವಿಗಳಿಗೆ ವಿತರಣೆ ನಡೆಯಲಿದೆ. ಎಲ್ಲರಿಗೂ ಈ ನಿವೇಶನಗಳನ್ನು ನೀಡಲು ಸಾಧ್ಯವಾಗುವುದಿಲ್ಲ, ಹಳೆಯ, ಹೊಸ ಅಜಿರ್ ಪರಿಶೀಲಿಸಿ ಜಾಗ ಪಡೆದುಕೊಂಡು ಎಲ್ಲರಿಗೂ ವಿತರಣೆ ನಡೆಯಲಿದೆ. ಈ ಹಿಂದೆ ಮನೆ ಸಲುವಾಗಿ 30 ಸಾವಿರ ರೂ. ವಂತಿಗೆ ಪಾವತಿಸಿದವರಿಗೆ ಬಡ್ಡಿ ಸಮೇತ ಹಣ ವಾಪಸ್ ಅವರ ಖಾತೆಗೆ ಜಮೆ ಮಾಡಲು ಸಮಿತಿ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನಂಬಬೇಡಿ, ಯಾರಿಗೂ ನಯಾಪೈಸೆ ಕೊಡಬೇಡಿ, ನಿವೇಶನ ಉಚಿತವಾಗಿ ವಿತರಣೆಯಾಗಲಿವೆ ಎಂದರು.