ಪ್ರತಿಭಟನೆಗೆ ಮಣಿದು ಪುಟ್ಪಾತ್ ಅತಿಕ್ರಮಣ ತೆರವು

ಅತಿಕ್ರಮಣ ತೆರವು
ಅತಿಕ್ರಮಣ ತೆರವು
Published on

ರಾಣೆಬೆನ್ನೂರ: ತಾಲೂಕಿನ ಹೊನ್ನತ್ತಿ ಗ್ರಾಮದಲ್ಲಿ ಹಾಯ್ದು ಹೋಗಿರುವ ಸಮ್ಮಸಗಿ&ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ಧಾರಿಯ ಅಕ್ಕಪಕ್ಕದ ಪುಟ್ಪಾತ್ಅನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಅಂಗಡಿಗಳನ್ನು ಹಾಕಿಕೊಂಡಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಪುಟ್ಪಾತ್ ಅತಿಕ್ರಮಣದಿಂದ ಹೆದ್ದಾರಿಯಲ್ಲಿ ಓಡಾಡುವವರಿಗೆ ತೀವ್ರ ತೊಂದರೆಯಾಗಿದೆ. ಹೊನ್ನತ್ತಿ ಗ್ರಾಮದ ಹೊನ್ನತ್ತಮ್ಮ ದೇವಿಗೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯದಿಂದಲೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ತೊಂದರೆ ಆಗುತ್ತಿದೆ.

ಇದರ ಜತೆಗೆ ಗ್ರಾಮದ ವಿದ್ಯಾಥಿರ್ಗಳು, ಮಹಿಳೆಯರು, ಸಾರ್ವಜನಿಕರು ಓಡಾಡಲು ಪುಟ್ಪಾತ್ ಇಲ್ಲದ ಕಾರಣ ರಸ್ತೆ ಮೇಲೆಯೆ ಓಡಾಡುವಂತಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಪುಟ್ಪಾತ್ ಅತಿಕ್ರಮಣ ತೆರವುಗೊಳಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.

ಟನಾ ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು, ಪುಟ್ಪಾತ್ ತೆರವುಗೊಳಿಸುವ ಕಾರ್ಯಾಚರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಕಾರ್ಯಾಚರಣೆ ನಡೆಸಿದ ಬಳಿಕವೇ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗುವುದು ಎಂದು ಪಟ್ಟುಹಿಡಿದರು. ನಂತರ ಅಧಿಕಾರಿಗಳು ಜೆಸಿಬಿ ಮೂಲಕ ಅತಿಕ್ರಮಣ ಆಗಿದ್ದ ಪುಟ್ಪಾತ್ ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾದರು. ಬಳಿಕ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.

ಪ್ರಮುಖರಾದ ಕೃಷ್ಣಪ್ಪ ನಾಯಕ, ಮಲ್ಲೇಶಪ್ಪ ಲಮಾಣಿ, ಶಿವಮೂತಿರ್ ನಾಯಕ, ರಾಮಚಂದ್ರಪ್ಪ ನಾಯಕ, ಸಕ್ರಪ್ಪ ಲಮಾಣಿ, ಬೀರಪ್ಪ ಲಮಾಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net