electricity ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ವಿದ್ಯುತ್ electricity ಖಾಸಗೀಕರಣ ವಿರೋಧಿಸಿ ಶಿಗ್ಗಾಂವ ಪಟ್ಟಣದಲ್ಲಿ ರೈತ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥ ತಿತ್ತಿ ಅವರಿಗೆ  ಮನವಿ ಸಲ್ಲಿಸಲಾಯಿತು.
ವಿದ್ಯುತ್ electricity ಖಾಸಗೀಕರಣ ವಿರೋಧಿಸಿ ಶಿಗ್ಗಾಂವ ಪಟ್ಟಣದಲ್ಲಿ ರೈತ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥ ತಿತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
Published on
ಶಿಗ್ಗಾಂವ: ರಾಜ್ಯದಲ್ಲಿ ವಿದ್ಯುತ್ electricity ಸರಬರಾಜು ಕಂಪನಿಗಳ ಖಾಸಗೀಕರಣ ವಿರೋಧಿಸಿ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಇಂಧನ ಮತ್ತು ಗ್ಯಾಸ್ ಬೆಲೆ ಹೆಚ್ಚಿಸುವ ಮೂಲಕ ರೈತರು ಮತ್ತು ಜನಸಾಮಾನ್ಯರ ಜತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ರೈತರಿಗೆ ಮತ್ತು ಜನಸಾಮಾನ್ಯರಿಗೆ ಅಗತ್ಯವಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಇದರಿಂದ ರೈತರ ಮತ್ತು ಅನೇಕ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ. ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಬಾರದು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದ ರೈತಾಪಿ ವರ್ಗದವರು ತಮ್ಮ ಕೃಷಿ ಚಟುವಟಿಕೆಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತಾರೆ. ಖಾಸಗೀಕರಣದಿಂದ ವಿದ್ಯುತ್ ನಂಬಿಕೊಂಡು ಕೃಷಿ ಚಟುವಟಿಕೆ ನಡೆಸುವ ರೈತರು ಹಾಗೂ ಕಾರ್ಮಿಕರಿಗೆ ಹಾನಿಯಾಗುವ ಸಂಭವ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೆಸ್ಕಾಂ ಸಂಸ್ಥೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನು ಕೈಬಿಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರೇಡ್-2 ತಹಸೀಲ್ದಾರ್ ವಿಶ್ವನಾಥ ತಿತ್ತಿ ರೈತರ ಮನವಿ ಸ್ವೀಕರಿಸಿದರು. ರೈತ ಸಂಘದ ಪದಾಧಿಕಾರಿಗಳಾದ ಆನಂದ ಕೆಳಗಿನಮನಿ, ನಾಗರಾಜ ಅಂಗಡಿ, ಪ್ರಕಾಶ ಮಣ್ಣೂರ, ನಾಗರಾಜ ಸಂಶಿ, ರಾಮನಗೌಡ ಗಾಳಿಗೌಡ್ರ, ಚಂದ್ರಶೇಖರ ಹಿರೇಮಠ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net