protest: ಬಾಂಗ್ಲಾದಲ್ಲಿ ಹಿಂದು ವ್ಯಕ್ತಿ ಹತ್ಯೆ ಖಂಡಿಸಿ ಪ್ರತಿಭಟನೆ

ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ಹತ್ಯೆ ಮಾಡಿರುವುದನ್ನು ಖಂಡಿಸಿ ರಟ್ಟಿಹಳ್ಳಿ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಪ್ರತಿಭಟನೆ ನಡೆಸಲಾಯಿತು. ಮೃತ್ಯುಂಜಯ ಬೆಣ್ಣಿ, ನವೀನ್ ಮಾದರ, ದೇವರಾಜ ನಾಗಣ್ಣನವರ, ಆಕಾಶ ಹುಲ್ಲತ್ತಿ, ಮಂಜು ಗೌಡರ, ಮಂಜು ವಾಲ್ಮೀಕಿ ಇತರರು ಇದ್ದರು.

Published on
ರಟ್ಟಿಹಳ್ಳಿ: ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪದಾಸ್ ಅವರನ್ನು ಸಜೀವವಾಗಿ ದಹನ ಮಾಡಿದ ಕೃತ್ಯ ಖಂಡಿಸಿ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪರಿಷತ್ತಿನ ಜಿಲ್ಲಾ ಸತ್ಸಂಗ ಪ್ರಮುಖ ಮೃತ್ಯುಂಜಯ ಬೆಣ್ಣಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ನಿರಂತರವಾಗಿ ಮುಂದುವರಿಯುತ್ತಿದೆ. ಯಾವುದೇ ತಪ್ಪು ಮಾಡದ ಅಮಾಯಕ ಹಿಂದು ವ್ಯಕ್ತಿ ದೀಪದಾಸ್ ಅವರನ್ನು ಬರ್ಬರವಾಗಿ ಹಲ್ಲೆ ಮಾಡಿ ದಹನ ಮಾಡಿರುವುದು ಅಮಾನವೀಯ ಘಟನೆಯಾಗಿದೆ. ಅಲ್ಲಿನ ಹಿಂದುಗಳಿಗೆ ಸರ್ಕಾರ ಸೂಕ್ತ ಭದ್ರತೆ ರಕ್ಷಣೆ ನೀಡಬೇಕು. ಕೇಂದ್ರ ಸರ್ಕಾರವು ಸಹ ಈ ಘಟನೆಗೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಬಾಂಗ್ಲಾದೇಶದಲ್ಲಿ ಅರಾಜಕತೆ ನಿರ್ಮಾಣವಾಗಿ ಅಲ್ಲಿನ ಹಿಂದು ಧರ್ಮದ ಜನಾಂಗದವರಿಗೆ ಅನ್ಯಾಯವಾಗುತ್ತಿದೆ. ಹಿಂದು ವ್ಯಕ್ತಿ ಹತ್ಯೆ ಅತ್ಯಂತ ಖಂಡನೀಯವಾಗಿದೆ ಎಂದು ತಿಳಿಸಿದರು.
ಪರಿಷತ್ತು ತಾಲೂಕು ಸಂಯೋಜಕ ನವೀನ್ ಮಾದರ, ಶಂಭು, ಆಕಾಶ ಹುಲ್ಲತ್ತಿ, ಮಂಜು ಗೌಡರ, ಮಂಜು ವಾಲ್ಮೀಕಿ, ಶಂಭಣ್ಣ ಗೂಳಪ್ಪನವರ, ಸುಶೀಲ ನಾಡಗೇರ, ಪ.ಪಂ.ಸದಸ್ಯರಾದ ರವಿ ಹದಡೇರ, ಬಸವರಾಜ ಆಡಿನವರ, ಸನೀಲ ಕಟ್ಟೀಮನಿ, ಸುನೀಲ ಸರಶೆಟ್ಟರ್, ನಾಗರಾಜ ದ್ಯಾವಕ್ಕಳವರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net