ಅಧ್ಯಕ್ಷ ಮಾಡಿದ ಹಣ ದುರುಪಯೋಗಕ್ಕೆ ಉಪಾಧ್ಯಕ್ಷ ಆತ್ಮಹತ್ಯೆ

Crime
Crime
Published on

ಶಿಗ್ಗಾಂವ: ಇಲ್ಲಿಯ ಸರ್ ಎಂ. ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂಡಿದ್ದರಿಂದ ಬೇಸತ್ತು ಉಪಾಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ಇಲ್ಲಿಯ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಬಸಪ್ಪ ಬಸಪ್ಪ ಅಡರಕಟ್ಟಿ (67) ಮೃತ ಉಪಾಧ್ಯಕ್ಷ.

ಇವರು ತಮ್ಮ ಸಂಘದ ಅಧ್ಯಕ್ಷ ಹಾಗೂ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂಡಿದ್ದರಿಂದ ಬೇಸತ್ತಿದ್ದರು. ಅಲ್ಲದೆ ಠೇವಣಿದಾರರು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದ ಕಾರಣ ಬೇಸತ್ತು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net