ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತ

ಸವಣೂರ ಪಟ್ಟಣದ ಗುರುವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಇತರ ಮಹನೀಯರ ಜಯಂತಿಗಳ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿದರು. ಎಂ.ಎಫ್. ಬಾರ್ಕಿ, ಪ್ರಮುಖರಾದ ಜಯತೀರ್ಥ ದೇಶಪಾಂಡೆ ಇತರರಿದ್ದರು.
ಸವಣೂರ ಪಟ್ಟಣದ ಗುರುವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಇತರ ಮಹನೀಯರ ಜಯಂತಿಗಳ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿದರು. ಎಂ.ಎಫ್. ಬಾರ್ಕಿ, ಪ್ರಮುಖರಾದ ಜಯತೀರ್ಥ ದೇಶಪಾಂಡೆ ಇತರರಿದ್ದರು.
Published on
ಸವಣೂರ: ಜಗಜ್ಯೋತಿ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ತಹಸೀಲ್ದಾರ್ ರವಿಕುಮಾರ ಕೊರವರ ಅಭಿಪ್ರಾಯಪಟ್ಟರು.
ಪಟ್ಟಣದ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಇತರ ಮಹನೀಯರ ಜಯಂತಿಗಳ ಆಚರಣೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ಕೇವಲ ಒಂದೇ ಜಾತಿಗೆ ಸೀಮಿತವಾಗಿಲ್ಲ. ಅವರು ನಾಡಿನ ಪ್ರತಿಯೊಬ್ಬರ ಮನ ಮನೆಗಳಲ್ಲಿದ್ದಾರೆ. ಬಸವಣ್ಣನವರು ಸಮಾನತೆ, ಸೌಹಾರ್ದ ಮತ್ತು ಶ್ರಮದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅವರ ಜಯಂತಿಯನ್ನು ಎಲ್ಲ ವರ್ಗದ ಜನರು ಒಗ್ಗೂಡಿ ಅರ್ಥಪೂರ್ಣವಾಗಿ ಆಚರಿಸುವುದು ಅತ್ಯಂತ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದವರೂ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಬೇಕು ಎಂದರು.
ಸಭೆಗೆ ಸುಮಾರು 25ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತಹಸೀಲ್ದಾರ್ ರವಿಕುಮಾರ ಕೊರವರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಆದಿ ಶಂಕರಾಚಾರ್ಯ ಜಯಂತಿ, ಭಗೀರಥ ಜಯಂತಿ ಹಾಗೂ ಗೌತಮ ಬುದ್ಧ ಜಯಂತಿಗಳ ಆಚರಣೆಯ ಕುರಿತು ಚರ್ಚಿಸಲಾಯಿತು. ಬಿಇಒ ಎಂ.ಎಫ್. ಬಾರ್ಕಿ, ಪ್ರಮುಖರಾದ ಜಯತೀರ್ಥ ದೇಶಪಾಂಡೆ, ಶ್ರೀನಿವಾಸ ಖಾರದ, ನಾಗರಾಜ ಸಾರತರಾಮ್, ಮಂಜುನಾಥ ಬೆಣ್ಣಿ, ವೀರೇಶ ರಾಯನಾಳ, ಪ್ರಕಾಶ ಬಾರ್ಕಿ, ನಾಗರಾಜ ವಾಲ್ಮೀಕಿ, ಆರೋಗ್ಯ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net