

ರಾಣೆಬೆನ್ನೂರ: ಅಡಕೆ ತಟ್ಟೆ ತಯಾರಿಸುವ ಫ್ಯಾಕ್ಟರಿ ಮಾಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ 7 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ರೇಣುಕಾ ಮಾಳಪ್ಪ ದೊಡ್ಡಪ್ಪನವರ ಹಾಗೂ ಭರಮಪ್ಪ ಹುಲಿಗೆಮ್ಮನವರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ಲಕ್ಷಮ್ಮ ಅಶೋಕ ಹಾಲಿಯಾಳ ಎಂಬುವರು ದೂರು ದಾಖಲಿಸಿದ್ದಾರೆ. ಆರೋಪಿತರು ಅಡಕೆ ತಟ್ಟೆ ತಯಾರಿಸುವ ಫ್ಯಾಕ್ಟರ್ ಮಾಡುವುದಾಗಿ ಹೇಳಿ 7 ಲಕ್ಷ ರೂ. ತೆಗೆದುಕೊಂಡಿದ್ದರು. ವಾಪಸ್ ಹಣ ಕೇಳಿದರೆ ಇಂದು ನಾಳೆ ಎಂದು ಸತಾಯಿಸಿದ್ದಾರೆ. ಅಲ್ಲದೆ ಫ್ಯಾಕ್ಟರಿಯಲ್ಲಿ ನಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.