ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿದ ಜನ Teacher

teacher ಸವಣೂರ ಪಟ್ಟಣದ ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಬುಧವಾರ ಶಿಕ್ಷಕ ಜಗದೀಶ ವಗ್ಗನವರ ಬಟ್ಟೆ ಹರಿದು, ಚಪ್ಪಲಿ ಹಾರ ಹಾಕಿ ಎಳೆದು ಕರೆತರುತ್ತಿರುವುದು
teacher ಸವಣೂರ ಪಟ್ಟಣದ ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಬುಧವಾರ ಶಿಕ್ಷಕ ಜಗದೀಶ ವಗ್ಗನವರ ಬಟ್ಟೆ ಹರಿದು, ಚಪ್ಪಲಿ ಹಾರ ಹಾಕಿ ಎಳೆದು ಕರೆತರುತ್ತಿರುವುದು
Published on
ಮೂರು ವರ್ಷಗಳಿಂದ ಇಂಗ್ಲಿಷ್ ಭಾಷಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ ವಗ್ಗನವರ ಕೆಲ ತಿಂಗಳಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾಗಿ ಆರೋಪಿಸಿ ಎಸ್​ಡಿಎಂಸಿ ಪದಾಧಿಕಾರಿಗಳು ಹಾಗೂ ಪಾಲಕರು ಸಾರ್ವಜನಿಕರೊಂದಿಗೆ ಸೇರಿ ಶಾಲೆಯಲ್ಲಿ ಥಳಿಸಿದರು. 
ಶಾಲೆಯಲ್ಲಿ ಗದ್ದಲ ಕೇಳಿ ಜಮಾವಣೆಗೊಂಡ ಸಾರ್ವಜನಿಕರನ್ನು ಹೊರ ಹಾಕಲು ಪೋಲಿಸ್ ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಪಾಲಕರನ್ನು ಉದ್ದೇಶಿಸಿ ಮಾತನಾಡಿ, ಆರೋಪಿ ಶಿಕ್ಷಕನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಲಾಗುವದು. ಕಾನೂನು ಪ್ರಕಾರ ಸೂಕ್ತ ತನಿಖೆಯನ್ನು ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು.
ಸವಣೂರಿಗೆ ಇಂದು ಕರಾಳ ದಿನವಾಗಿದೆ. ಶೇ. 99.99 ಉತ್ತಮ ಶಿಕ್ಷಕರು ಇದ್ದಾರೆ. ಒಬ್ಬಶಿಕ್ಷಕನ ಮೇಲೆ ಇಂತಹ ಆರೋಪ ಬಂದಿದೆ. ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಆಗುತ್ತದೆ. ಎಲ್ಲ ಶಾಲೆಗಳ ಮಕ್ಕಳ ಪಾಲಕರು ಸಹ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಶುಕ್ಲಾ ಹೇಳಿದರು. 
ಡಿಡಿಪಿಐ ಮೋಹನ ದಂಡಿನ, ತಹಸೀಲ್ದಾರ್ ರವಿಕುಮಾರ ಕೊರವರ, ಬಿಇಒ ಎಂ.ಎಫ್. ರ್ಬಾ ಹಾಗೂ ಇತರರು ಇದ್ದರು.
ಸವಣೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net