

ರಾಣೆಬೆನ್ನೂರ: ಜಮೀನಿನಲ್ಲಿ ರಾಶಿ ಹಾಕಿದ್ದ ಕಡಲೆಕಾಳು ಗಿಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಡಲೆಕಾಳು ಸಂರ್ಪೂಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಧು ದೇವೇಂದ್ರಪ್ಪ ಮಡಿವಾಳ ಎಂಬ ರೈತನ ಕಡಲೆಕಾಳು ಸುಟ್ಟಿರುವುದು.
ಇವರು ನಾಲ್ಕು ಎಕರೆ ಜಮೀನಿನಲ್ಲಿ ಕಡಲೆಕಾಳು ಬೆಳೆದಿದ್ದರು. ಫಸಲು ಬಂದ ಹಿನ್ನೆಲೆಯಲ್ಲಿ ಗಿಡಗಳನ್ನು ಕಿತ್ತು ರಾಶಿ ಹಾಕಿದ್ದ. ರಾತ್ರಿ ಸಮಯದಲ್ಲಿ ಯಾರೋ ದುಷ್ಕಮಿರ್ಗಳು ಕಡಲೆಕಾಳುಗಳಿಗೆ ಬೆಂಕಿ ಹಚ್ಚಿದ್ದು, ಸಂರ್ಪೂಣ ಸುಟ್ಟು ಭಸ್ಮವಾಗಿವೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.