ತಾಲೂಕಿನ ಯತ್ತಿನಹಳ್ಳಿ ಎಂ.ಕೆ. ಗ್ರಾಮದ ಕಾತಿರ್ಕ ರಾಮಪ್ಪ ಮಡಿವಾಳರ ಬಂ-ಧಿತ. ಈತ ಹಿರೇಕೆರೂರು ಅರಣ್ಯ ವಲಯದಲ್ಲಿ 2 ನವಿಲು ಬೇಟೆಯಾಡಿದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಅಬಲೂರು& ಯತ್ತಿನಹಳ್ಳಿ ಎಂ.ಕೆ. ರಸ್ತೆಯಲ್ಲಿ ಬೈಕ್, ಟಾರ್ಚ್ ಮತ್ತು 2 ಸಾವನ್ನಪ್ಪಿದ ನವಿಲುಗಳು ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾತಿರ್ಕ ಮಡಿವಾಳರ ವಿರುದ್ಧ ದೂರು ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಿಜಯ ಮುಡಬಾಗಿಲ, ಉಪವಲಯ ಅರಣ್ಯಾಧಿಕಾರಿಗಳಾದ ಸುರೇಶ ಬಟ್ಟೂರ, ಸಾದಿಕ್ ಪೆಂಡಾರಿ ಮತ್ತು ಸಿಬ್ಬಂದಿ ಇದ್ದರು.