ಮಳೆ ಆತಂಕದಲ್ಲೂ ದರದಲ್ಲಿ ಸ್ಥಿರತೆ: ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಬೆಲೆ ಕುಸಿತವಾಗಬಹುದೆಂಬ ಆತಂಕ ರೈತರಲ್ಲಿ ಮನೆಮಾಡಿತ್ತು. ಆದರೆ, ಸೋಮವಾರ ಮಾರುಕಟ್ಟೆಯಲ್ಲಿ ಡಬ್ಬಿ ಮತ್ತು ಕಡ್ಡಿ ತಳಿಗಳಿಗೆ ಉತ್ತಮ ಬೇಡಿಕೆ ಕಂಡುಬಂದಿತು. ಹಿಂದಿನಂತೆಯೇ 1,000- 1,500 ರೂಪಾಯಿ ವ್ಯತ್ಯಾಸದಲ್ಲಿ ಖರೀದಿ ನಡೆದಿದ್ದು, ಬೆಳೆಗಾರರು ನಿಟ್ಟುಸಿರುಬಿಡುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.