ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕಿದೆ; ಶಾಂತಮಣಿ

ಕಾರ್ಯಕ್ರಮ
ಕಾರ್ಯಕ್ರಮ
Published on

ರಾಣೆಬೆನ್ನೂರು: ಮಣ್ಣಿನ ಆರೋಗ್ಯ ಸಂರಕ್ಷಣೆ, ಸುಸ್ಥಿರ ಕೃಷಿ ಉತ್ತೇಜಿಸುವ ಉದ್ದೇಶದಿಂದ ರಾಸಾಯನಿಕ ಗೊಬ್ಬರದ ಅಸಮರ್ಪಕ ಬಳಕೆ ನಿಯಂತ್ರಿಸುವುದು, ನೈಸಗಿರ್ಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು, ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಖೇತ್ ಬಚಾವೋ ಆಂದೋಲನ ಅಭಿಯಾನದ ಪ್ರಮುಖ ಗುರಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ತಿಳಿಸಿದರು.

ತಾಲೂಕಿನ ಅಸುಂಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಖೇತ್ ಬಚಾವೋ ಆಂದೋಲನ, ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತ ರೈತರಿಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹವಮಾನ ವೈಪರಿತ್ಯದ ಸಮಯದಲ್ಲಿ ರೈತರು ದೃತಿಗೆಡದೆ ಸಮಗ್ರ ಕೃಷಿ ಪದ್ಧತಿಯಿಂದ ಆದಾಯ ಏರಿಳಿತಗಳನ್ನು ನಿರ್ವಹಿಸಬೇಕು. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆಯು ಅಭಾವದಿಂದ ಕೂಡಿದ್ದು ಇಂತಹ ಸಮಯದಲ್ಲಿ ರೈತರು ಕಡಿಮೆ ಖಚಿರ್ನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮಣ್ಣಿನ ಪರೀಕ್ಷಾ ವರದಿ ಆಧರಿಸಿ ಬೆಳೆಗಳಿಗೆ ಅಗತ್ಯವಿರುವ ಪ್ರಮಾಣದಲ್ಲಿ ಗೊಬ್ಬರ ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜತೆಗೆ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದರು.

ಕೃಷಿ ತಾಂತ್ರಿಕ ಅಧಿಕಾರಿಗಳಾದ ಶ್ರೀ ಫಕ್ಕೀರಪ್ಪ ಪಟ್ಟಣ ಮಾತನಾಡಿ, ಪ್ರಸ್ತುತ ಕೃಷಿಯಲ್ಲಿ ಯೂರಿಯಾ ರಸಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಪೋಷಕಾಂಶಗಳ ಸಮತೋಲನ ಹದಗೆಡುತ್ತಿದೆ. ಮಣ್ಣಿಗೆ ಜೀವಕೊಡುವ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಮಣ್ಣು ಬರಡಾಗುವ ಹಂತದಲ್ಲಿದ್ದು ಬೆಳೆ ಪರಿವರ್ತನೆ ಜೊತೆಗೆ ಸಾವಯವ ಕೃಷಿ ಆಧಾರಿತ ಪದ್ಧತಿಗಳಾದ ಮಾಗಿ ಉಳಿಮೆ, ಕೊಟ್ಟಿಗೆ ಗೊಬ್ಬರ, ಎರೆಹುಳುಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕೆ ಗೊಬ್ಬರಗಳ ಬಳಕೆಯಿಂದ ಮಣ್ಣಿಗೆ ಮರುಜೀವ ತರುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಹೇಶ ಕಾರಗಿ, ರಸಗೊಬ್ಬರಗಳ ಸಮರ್ಪಕ ಬಳಕೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಕುರಿಸಾಕಣಿಕೆ ಮತ್ತು ಹಿತ್ತಲ ಕೋಳಿ ಸಾಕಾಣಿಕೆಯಿಂದ ಕೃಷಿಯಲ್ಲಿ ಸುಸ್ಥಿರತೆ ಹಾಗೂ ನಿರಂತರ ಆದಾಯ ಕುರಿತು ಉಪನ್ಯಾಸ ನೀಡಿದರು.

ರೈತರಾದ ನಂದೀಶ್ವರ ಹುಲ್ಮನಿ, ಲಿಂಗನಗೌಡ ಪಾಟೀಲ, ಲಲಿತಮ್ಮ ಪಾರ್ವತೇರ, ಪ್ರಭುಗೌಡ ಗುತ್ತಲಗೌಡ್ರ, ಪರಮೇಶ್ವರ ನೆಗಳೂರ, ಚೌಡಪ್ಪ ಬೂದಿಹಾಳ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net