footpath encroachment ಫುಟ್​ಪಾತ್ ಅತಿಕ್ರಮಣ ತೆರವಿಗೆ ವಾರ ಕಾಲಾವಕಾಶ

footpath encroachment ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳು, ಟೆಂಪೋ, ರಿಕ್ಷಾ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ವಿಠ್ಠಲ ಚೌಗುಲಾ ಮಾತನಾಡಿದರು.
footpath encroachment ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳು, ಟೆಂಪೋ, ರಿಕ್ಷಾ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ವಿಠ್ಠಲ ಚೌಗುಲಾ ಮಾತನಾಡಿದರು.
Published on

ಹಾನಗಲ್ಲ: ಪಟ್ಟಣದಲ್ಲಿ ಫುಟ್​ಪಾತ್ ಅತಿಕ್ರಮಣ (footpath encroachment), ರಿಕ್ಷಾ, ಟೆಂಪೋ ಸೇರಿದಂತೆ ವಿವಿಧ ವಾಹನಗಳ ನಿಲುಗಡೆ ತೆರವುಗೊಳಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ ಎಂದು ತಹಸೀಲ್ದಾರ್ ವಿಠ್ಠಲ ಚೌಗುಲಾ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪುರಸಭೆ, ಪೊಲೀಸ್, ವಾಕರಸಾ ಸಂಸ್ಥೆ ಅಧಿಕಾರಿಗಳು ಹಾಗೂ ರಿಕ್ಷಾ ಚಾಲಕರ ಸಂಘ, ಟೆಂಪೋ ಚಾಲಕರ ಸಂಘದ ಪದಾಧಿಕಾರಿಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

ಹಾನಗಲ್ಲ ಬಸ್ ನಿಲ್ದಾಣದ ಬಳಿ ವಿಪರೀತ ವಾಹನ ದಟ್ಟಣೆ ಇದೆ. ಇಲ್ಲಿರುವ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳ ಓಡಾಟಕ್ಕೆ ಬಹಳಷ್ಟು ಅನನುಕೂಲವಾಗಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಟಿ.ಜಿ. ರಸ್ತೆ ಫುಟ್​ಪಾತ್ ತುಂಬ ಗೂಡಂಗಡಿಗಳೇ ಇವೆ. ಇದರೊಂದಿಗೆ ರಿಕ್ಷಾಗಳು ಯಾವುದೇ ನಿಯಮ ಪಾಲಿಸದೆ ರಸ್ತೆಯನ್ನೇ ಆವರಿಸಿ ನಿಂತಿರುತ್ತವೆ. ಮಹಾತ್ಮ ಗಾಂಧಿ ವೃತ್ತದವರೆಗೂ ವಿವಿಧ ಅಂಗಡಿಗಳು, ವಾಹನಗಳ ನಿಲುಗಡೆ ಸೇರಿದಂತೆ ಪ್ರಯಾಣಿಕರಿಗೆ ತೀರ ಅನನುಕೂಲವಾಗಿದೆ ಎಂದರು.

ಫುಟ್​ಪಾತ್ ಅತಿಕ್ರಮಣ, ವಾಹನ ದಟ್ಟಣೆ, ಪಾಕಿಂಗ್ ಸಮಸ್ಯೆ ಪರಿಹರಿಸಲು ಶಾಸಕ ಶ್ರೀನಿವಾಸ ಮಾನೆ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಆದ್ದರಿಂದ ವ್ಯಾಪಾರಸ್ಥರು, ಗೂಡಂಗಡಿಕಾರರು, ವಾಹನಗಳ ಮಾಲೀಕರಿಗೆ ಒಂದು ವಾರ ಸಮಯ ನೀಡಿದ್ದು, ಅಷ್ಟರೊಳಗೆ ತೆರವುಗೊಳಿಸಬೇಕು. ಗಡುವು ಮೀರಿದ ನಂತರ ಕಾರ್ಯಾಚರಣೆ ಮೂಲಕ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ಪಟ್ಟಣದ ಸಂಚಾರ ದಟ್ಟಣೆ ನಿಯಂತ್ರಣ, ಪರ್ಯಾಯ ರ್ಪಾಂಗ್ ವ್ಯವಸ್ಥೆ, ತಡಸ- ಗೊಂದಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ, ಕೂಡಲೇ ರ್ಪಾಂಗ್​ಗೆ ಜಾಗ ಗುರುತು, ಆಟೋ ನಿಲ್ದಾಣ, ಸ್ಟೇಟ್ ಬ್ಯಾಂಕ್ ರಸ್ತೆ ದಟ್ಟಣೆ ನಿಯಂತ್ರಣ, ಪಟ್ಟಣದಲ್ಲಿ ಹಗಲು ಹೊತ್ತಿನಲ್ಲಿ ವಾಹನಗಳಿಂದ ವಸ್ತುಗಳ ತೆರವು ನಿಯಂತ್ರಣ, ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಬಸ್​ನಿಲ್ದಾಣ ಹಾಗೂ ಮಹಾತ್ಮ ಗಾಂಧಿ ವೃತ್ತದಲ್ಲಿ ಪೊಲೀಸ್ ಕಣ್ಗಾವಲು ಸೇರಿದಂತೆ 7 ದಿನಗಳಲ್ಲಿ ಎಲ್ಲ ವ್ಯವಸ್ಥೆ ಮಾಡಿ ಸೂಚನೆ ನೀಡಲಾಗುತ್ತದೆ. ಅದಕ್ಕೆ ಸಾರ್ವಜನಿಕರು, ವಾಹನ ಮಾಲೀಕರು ಚಾಲಕರು ಸಹಕರಿಸಬೇಕು ಎಂದು ಕೋರಿದರು.

ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಬಸವರಾಜ ಹಳಬಣ್ಣನವರ, ಆಡೂರು ಪಿಎಸ್​ಐ ಕುಮಾರ ಕೂರಗುಂದ, ಕ್ರೖೆಂ ಪಿಎಸ್​ಐ ದೀಪಾಲಿ ಗುಡೋಡಗಿ, ಸಾರಿಗೆ ಘಟಕ ವ್ಯವಸ್ಥಾಪಕ ಪರಶುರಾಮ ಪ್ರಭಾಕರ, ಸಹಾಯಕ ನಿರೀಕ್ಷಕ ಎಂ.ಬಿ. ಚವ್ಹಾಣ, ಟೆಂಪೋ ಮಾಲೀಕರ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಆರ್.ಎಚ್. ರಾಯಪ್ಪ ಉಪಸ್ಥಿತರಿದ್ದರು.

ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳು, ಟೆಂಪೋ, ರಿಕ್ಷಾ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ವಿಠ್ಠಲ ಚೌಗುಲಾ ಮಾತನಾಡಿದರು. ವೈ.ಕೆ. ಜಗದೀಶ, ಬಸವರಾಜ ಹಳಬಣ್ಣನವರ, ಕುಮಾರ ಕೂರಗುಂದ, ದೀಪಾಲಿ ಗುಡೋಡಗಿ ಪರಶುರಾಮ ಪ್ರಭಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net