ಗಾಂಜಾ ಸಾಗಿಸುತ್ತಿದ್ದವನ ಬಂಧನ; ಓಡಿ ಹೋದ ನಾಲ್ವರು

Crime
Crime
Published on

ಶಿಗ್ಗಾಂವಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವಾಹನ ಜಪ್ತಿ ಮಾಡಿದ ಪೊಲೀಸರು 1.53 ಲಕ್ಷ ರೂ. ಮೌಲ್ಯದ 3014 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡ ಘಟನೆ ತಾಲೂಕಿನ ವಡಗಟ್ಟಾ ನಾಕಾ ಬಳಿ ನಡೆದಿದೆ.

ಹಾನಗಲ್ಲ ತಾಲೂಕು ಬೊಮ್ಮನಹಳ್ಳಿಯ ಇಮಾಮ್ ಖಾಸೀಂ ನೂರ್ ಅಹ್ಮದ್ ಮಕಾನದಾರ (25), ಸದ್ದಾಂ ನೂರ ಅಹ್ಮದ್ ಮಕಾನದಾರ, ರಹೀಮ ಮಕಾನದಾರ, ರಶೀದ್ ಮರದಾನಸಾಬ ವಾಗಿನಕೊಪ್ಪ ಹಾಗೂ ವಹಾಬ್ ನನ್ನೆಸಾಬ ಹನಕನಹಳ್ಳಿ ಎಂಬುವರು ಟಾಟಾ ಇಂಟ್ರಾ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ ಸಮೇತ ವಾಹನ ಚಾಲಕನನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ತಲೆಮರಿಸಿಕೊಂಡಿದ್ದಾರೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net